![](https://kannadadunia.com/wp-content/uploads/2022/06/Karnataka_high_court_EPS1479.jpg)
ಬೆಂಗಳೂರು : ಹೈಕೋರ್ಟ್ ಸೇರಿ ರಾಜ್ಯದ ಎಲ್ಲ ಅಧೀನ ನ್ಯಾಯಾಲಯಗಳಿಗೂ ಪ್ರತಿ ತಿಂಗಳ 4 ನೇ ಶನಿವಾರ ರಜೆ ನೀಡಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆ ನೀಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಹೈಕೋರ್ಟ್ ಸೇರಿ ರಾಜ್ಯದ ಎಲ್ಲ ಅಧೀನ ನ್ಯಾಯಾಲಯಗಳಿಗೂ ನಾಲ್ಕನೇ ಶನಿವಾರ ರಜೆ ನೀಡಿ ಹೈಕೋರ್ಟ್ ನ ಜನರಲ್ ವಿ. ಶ್ರೀಶಾನಂದ್ ಆದೇಶ ಹೊರಡಿಸಿದ್ದಾರೆ.
ಈ ತಿಂಗಳಿನಿಂದ ನಾಲ್ಕನೇ ಶನಿವಾರದ ರಜೆ ಎಲ್ಲಾ ನ್ಯಾಯಾಲಯಗಳಿಗೂ ಅನ್ವಯವಾಗಲಿದೆ. ಈ ಹಿನ್ನೆಲೆಯಲ್ಲಿ ರಜೆಯನ್ನು ಎಲ್ಲಾ ನ್ಯಾಯಾಲಯಗಳ ಸಿಬ್ಬಂದಿಗೂ ವಿಸ್ತರಿಸಲಾಗಿದೆ.