ಬೆಂಗಳೂರು: ಹೊಸ ವರ್ಷದ ಸಂಭ್ರಮದ ಬೆನ್ನಲ್ಲೇ ರಾಜ್ಯ ಸರ್ಕಾರ ಕೆಲ ಹಿರಿಯ ಐಎಎಸ್ ಅಧಿಕಾರಿಗಳು ಹಾಗೂ ಐಪಿಎಸ್ ಅಧಿಕಾರಿಗಳಿಗೆ ಹೊಸ ವರ್ಷದ ಭರ್ಜರಿ ಗಿಫ್ಟ್ ನೀಡಿದೆ.
42 ಐಎಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಳದೊಂದಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಅಲ್ಲದೇ 53 ಐಪಿಎಸ್ ಅಧಿಕಾರಿಗಳಿಗೂ ವೇತನ ಶ್ರೇಣಿ ಹೆಚ್ಚಳ ಹಾಗೂ ಬಡ್ತಿ ನೀಡಿ ಆದೇಶ ಹೊರಡಿಸಿದೆ.
ಹೊಸ ವರ್ಷದ ಮೊದಲ ದಿನವೇ ಜಾರಿಯಾಗುವಂತೆ ವೇತನ ಶ್ರೇಣಿ ಹೆಚ್ಚಳ ಮಾಡಲಾಗಿದೆ.