ಪುಣೆ ಪುರಸಭೆಯ ವ್ಯಾಪ್ತಿಯಲ್ಲಿರುವ 22 ಖಾಸಗಿ ಲಸಿಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಒಟ್ಟು 1.24 ಲಕ್ಷ ಕೋವಿಶೀಲ್ಡ್ ಲಸಿಕೆ ಡೋಸ್‌ಗಳನ್ನು ಸಂಗ್ರಹಿಸಲಾಗಿದೆ ಎಂದು ಇತ್ತೀಚಿನ ಪುಣೆ ಮುನ್ಸಿಪಲ್ ಕಾರ್ಪೊರೇಷನ್ (PMC) ವರದಿಯಲ್ಲಿ ಬಹಿರಂಗವಾಗಿದೆ.
ಈ ಲಸಿಕೆಗಳು ಮುಂದಿನ 38 ದಿನಗಳಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಒಟ್ಟು 1.24 ಲಕ್ಷ ಲಸಿಕೆಗಳಲ್ಲಿ, ಸುಮಾರು 1.09 ಲಕ್ಷ ಡೋಸ್‌ಗಳು ಜುಪಿಟರ್ ಆಸ್ಪತ್ರೆಯಲ್ಲಿವೆ. ಇವು ಮಾರ್ಚ್ 5 ರಂದು ಎಕ್ಸ್‌ಪೈರ್ ಆಗಲಿವೆ.
ನಮ್ಮ ಬಳಿ ಒಟ್ಟು 1.50 ಲಕ್ಷ ಡೋಸ್‌ಗಳಿವೆ. ಅವುಗಳು ಮಾರ್ಚ್ 5 ರಂದು ಎಕ್ಸ್‌ಪೈರ್ ಆಗಲಿವೆ. ಅವುಗಳಲ್ಲಿ, ನಾವು ಈವರೆಗೂ ಕೇವಲ 50 ಡೋಸ್‌ಗಳನ್ನು ಬಳಸಿದ್ದೇವೆ. ಇನ್ನು ಮಾರ್ಚ್ 5ರ ವೇಳೆಗೆ 1,09,010 ಡೋಸ್‌ಗಳನ್ನು ಬಳಸುವುದು ಕಷ್ಟಸಾಧ್ಯ ಎಂದು ಜುಪಿಟರ್ ಆಸ್ಪತ್ರೆಯ ಹಿರಿಯ ಆಡಳಿತಾಧಿಕಾರಿ ತಿಳಿಸಿದ್ದಾರೆ.
BREAKING NEWS: 2 ದಿನ ಶಾಲೆ, ಕಾಲೇಜಿಗೆ ರಜೆ; ಬೆಳಗ್ಗೆ 6 ರಿಂದ 9 ರ ವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ
ವಾಡಿಯಾ ಆಸ್ಪತ್ರೆಯಲ್ಲಿ 1,330 ಕೋವಿಶೀಲ್ಡ್ ಲಸಿಕೆಯ ಡೋಸ್‌ಗಳಿವೆ. ಇವು ಮುಂದಿನ ಏಳು ದಿನಗಳಲ್ಲಿ ಎಕ್ಸ್‌ಪೈರ್ ಆಗಲಿವೆ. ಅದೇ ರೀತಿ, ನಗರದ ಭಾರತಿ ಆಸ್ಪತ್ರೆಯಲ್ಲಿ ಫೆಬ್ರವರಿ 28 ರಂದು 886 ಡೋಸ್‌ಗಳ ಅವಧಿ ಮುಗಿಯುತ್ತಿದೆ ಮತ್ತು 1,827 ಡೋಸ್‌ಗಳ ಅವಧಿ ಮಾರ್ಚ್ 5 ರಂದು ಮುಕ್ತಾಯಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಇದಲ್ಲದೆ, ಕೆಲವು ಕೇಂದ್ರಗಳು ಮುಂದಿನ ಮೂರು ದಿನಗಳಲ್ಲಿ ಅವಧಿ ಮುಗಿಯುವ ಕೋವಿಶೀಲ್ಡ್ ಲಸಿಕೆಯ ಸ್ಟಾಕ್ ಅನ್ನು ಸಹ ಹೊಂದಿವೆ. ಇದರಿಂದ ಆಡಳಿತ ಮಂಡಳಿಗೆ ಭಾರೀ ನಷ್ಟವಾಗಲಿದೆ. ಈ ಭಯದಿಂದ, ಎಲ್ಲಾ ಆಡಳಿತ ಮತ್ತು ಆಸ್ಪತ್ರೆ ಅಧಿಕಾರಿಗಳು, ಲಸಿಕೆಗಳು ವ್ಯರ್ಥವಾಗುವುದನ್ನು ತಡೆಯಲು ಸಹಾಯ ಮಾಡುವಂತೆ ಸರ್ಕಾರವನ್ನು ಕೋರಿದ್ದಾರೆ.