ಮೈಸೂರು: ಮಳಲಿ ಮಸೀದಿಯ ಒಂದು ಹಿಡಿ ಮರಳನ್ನೂ ಕೊಡುವುದಿಲ್ಲ ಎಂಬ ಎಸ್ ಡಿ ಪಿ ಐ ಸಂಘಟನೆ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆಗೆ ತಿರುಗೇಟು ನೀಡಿರುವ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್, ಗಲಭೆ, ಪ್ರಚೋದನೆಗಳಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡುವ ಅಗತ್ಯವಿಲ್ಲ. ಆದರೆ ನಮ್ಮ ದೇವಾಲಯಗಳನ್ನು ಕಾನೂನು ಪ್ರಕಾರವೇ ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಮುತಾಲಿಕ್, ಅಬ್ದುಲ್ ಮಜೀದ್ ಹೇಳಿಕೆಗಳನ್ನು ಖಂಡಿಸುತ್ತೇನೆ. ಹಲವು ದೇಗುಲಗಳನ್ನು ಕೆಡವಿ ಮಸೀದಿ ನಿರ್ಮಿಸಿದ್ದಾರೆ. ಇಂತಹ ಮಸೀದಿಗಳನ್ನು ಮತ್ತೆ ಮರಳಿ ಪಡೆದುಕೊಳ್ಳುತ್ತೇವೆ. ತಾಕತ್ತಿದ್ದರೆ ಇದನ್ನು ತಡೆಯಲಿ ಎಂದು ಸವಾಲು ಹಾಕಿದರು.
BIG NEWS: ಕೇವಲ 15 ದಿನದಲ್ಲಿ ಬೆಂಗಳೂರಿನಲ್ಲಿ 80 ಡೆಂಗ್ಯೂ ಪ್ರಕರಣ ಪತ್ತೆ
ಬಾಬ್ರಿ ಮಸೀದಿ ವಿಚಾರದಲ್ಲಿಯೂ ಹೀಗೆ ಆಯಿತು. ಬಾಬ್ರಿ ಮಸೀದಿ ಕೆಡವಿ ರಾಮ ಮಂದಿರ ನಿರ್ಮಿಸುತ್ತಿದ್ದೇವೆ. ಒಂದು ಹನಿ ರಕ್ತ ವ್ಯರ್ಥವಾಗಲು ಬಿಡುವುದಿಲ್ಲ. 30 ಸಾವಿರ ದೇವಾಲಯಗಳನ್ನು ನಾವು ಕಾನೂನು ಪ್ರಕಾರವೇ ವಾಪಸ್ ಪಡೆಯುತ್ತೇವೆ ಎಂದು ಹೇಳಿದರು.