ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಚರ್ಚೆ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ 28 ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿಗಾಗಿ ಭಾರಿ ಪೈಪೋಟಿ ನಡುವೆಯೂ ಸಿಎಂ ಬಸವರಾಜ್ ಬೊಮ್ಮಾಯಿ ಬೆಂಗಳೂರು ಉಸ್ತುವಾರಿಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಸಚಿವ ಆರ್.ಅಶೋಕ್ ಹಾಗೂ ಮಾಧುಸ್ವಾಮಿ ಇಬ್ಬರು ಸಚಿವರನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಜಿಲ್ಲಾ ಉಸ್ತುವರಿ ಜವಾಬ್ದಾರಿ ಹಂಚಲಾಗಿರುವುದು ವಿಶೇಷ.
ಉಸ್ತುವಾರಿ ಸಚಿವರ ಪಟ್ಟಿ:
ಸಿಎಂ ಬಸವರಾಜ್ ಬೊಮ್ಮಾಯಿ – ಬೆಂಗಳೂರು ನಗರ
ಡಾ.ಕೆ.ಸುಧಾಕರ್ – ಬೆಂಗಳೂರು ಗ್ರಾಮಾಂತರ
ಗೋವಿಂದ ಕಾರಜೋಳ – ಬೆಳಗಾವಿ
ವಿ.ಸೋಮಣ್ಣ – ಚಾಮರಾಜನಗರ
ಶ್ರೀರಾಮುಲು-ಬಳ್ಳಾರಿ
ಎಸ್ ಅಂಗಾರ-ಉಡುಪಿ
ಅರಗ ಜ್ನಾನೇಂದ್ರ- ತುಮಕೂರು
ಬಿ.ಸಿ ಪಾಟೀಲ್ – ಚಿತ್ರದುರ್ಗ-ಗದಗ
ಮುರುಗೇಶ್ ನಿರಾಣಿ- ಕಲಬುರ್ಗಿ
ಉಮೇಶ್ ಕತ್ತಿ- ವಿಜಯಪುರ
ಗೋಪಾಲಯ್ಯ- ಹಾಸನ-ಮಂಡ್ಯ
ಶಂಕರ ಮುನೇನಕೊಪ್ಪ- ರಾಯಚೂರು- ಬೀದರ್
ಹಾಲಪ್ಪ ಆಚಾರ್ -ಧಾರವಾಡ
ಸುನೀಲ್ ಕುಮಾರ್- ದಕ್ಷಿಣ ಕನ್ನಡ
ಎಂಟಿಬಿ ನಾಗರಾಜ್ – ಚಿಕಬಳ್ಳಾಪುರ
ಪ್ರಭು ಚೌವ್ಹಾಣ್ – ಯಾದಗಿರಿ
ಕೋಟಾಶ್ರೀನಿವಾಸ್ ಪೂಜಾರಿ – ಉತ್ತರ ಕನ್ನಡ
ಕೆ ಎಸ್ ಈಶ್ವರಪ್ಪ- ಚಿಕ್ಕಮಗಳೂರು
ಆನಂದ್ ಸಿಂಗ್ – ಕೊಪ್ಪಳ
ಶಿವರಾಮ್ ಹೆಬ್ಬಾರ್ – ಹಾವೇರಿ
ಬೈರತಿ ಬಸವರಾಜ್-ದಾವಣಗೆರೆ
ಮುನಿರತ್ನ-ಕೋಲಾರ
ಎಸ್.ಟಿ.ಸೋಮಶೇಖರ್ – ಮೈಸೂರು
ಶಶಿಕಲಾ ಜೊಲ್ಲೆ – ವಿಜಯಪುರ
ನಾರಾಯಣಗೌಡ-ಶಿವಮೊಗ್ಗ
ಬಿ.ಸಿ.ನಾಗೇಶ್ -ಕೊಡಗು
ಅಶ್ವತ್ಥನಾರಾಯಣ – ರಾಮನಗರ
ಸಿ.ಸಿ.ಪಾಟೀಲ್ – ಬಾಗಲಕೋಟೆ