ಅನೇಕ ಜನರು ವೃತ್ತಿಪರ ಡ್ರೈವಿಂಗ್ ಕಲಿಯದೆ ವಾಹನ ಚಲಾಯಿಸಲು ಪ್ರಾರಂಭಿಸುತ್ತಾರೆ. ಇದು ಅಪಘಾತ ಮತ್ತು ಜೀವಹಾನಿ ಸಂಭವಿಸಲು ಕಾರಣವಾಗುತ್ತದೆ.
ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ರಸ್ತೆ ಅಪಘಾತಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಮಾರುತಿ ಸುಜುಕಿ 2005 ರಲ್ಲಿ ಮಾರುತಿ ಸುಜುಕಿ ಡ್ರೈವಿಂಗ್ ಸ್ಕೂಲ್ (ಎಂಎಸ್ಡಿಎಸ್) ಅನ್ನು ಪ್ರಾರಂಭಿಸಿತು. ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಬುಧವಾರ ದೇಶಾದ್ಯಂತ 500 ವೃತ್ತಿಪರ ಚಾಲನಾ ತರಬೇತಿ ಕೇಂದ್ರಗಳನ್ನು ತಲುಪಿದೆ ಎಂದು ಹೇಳಿದೆ.
2025 ರ ವೇಳೆಗೆ ಸುಮಾರು 25 ಲಕ್ಷ ಜನರಿಗೆ ತರಬೇತಿ ನೀಡುವ ಗುರಿಯನ್ನು ಕಂಪನಿ ಹೊಂದಿದೆ. ಈಗ 500 ಅತ್ಯಾಧುನಿಕ ಚಾಲನಾ ತರಬೇತಿ ಶಾಲೆಗಳೊಂದಿಗೆ ಮಾರುತಿ ಸುಝುಕಿ 242 ನಗರಗಳಲ್ಲಿ ಡ್ರೈವಿಂಗ್ ಸ್ಕೂಲ್ ಪ್ರಾರಂಭಿಸಿದ್ದು, 17 ಲಕ್ಷಕ್ಕೂ ಹೆಚ್ಚು ಜನರಿಗೆ ಚಾಲನಾ ತರಬೇತಿಯನ್ನು ನೀಡುತ್ತಿದೆ.
ಎಂಎಸ್ಡಿಎಸ್ ನೆಟ್‌ವರ್ಕ್ ಸುಮಾರು 1,500 ಪ್ರಮಾಣೀಕೃತ ಮತ್ತು ಅರ್ಹ ತಜ್ಞ ತರಬೇತುದಾರರನ್ನು ಹೊಂದಿದ್ದು, ಸುರಕ್ಷಿತ ಚಾಲನಾ ತರಬೇತಿಯನ್ನು ನೀಡುತ್ತದೆ. 2025 ರ ವೇಳೆಗೆ, ಮಾರುತಿ ಸುಜುಕಿ ಡ್ರೈವಿಂಗ್ ಸ್ಕೂಲ್ ನೆಟ್‌ವರ್ಕ್ ಅನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ ಮತ್ತು ಗುಣಮಟ್ಟದ ಚಾಲನಾ ಕೌಶಲ್ಯದ ಕುರಿತು 2.5 ಮಿಲಿಯನ್ ಜನರಿಗೆ ತರಬೇತಿ ನೀಡುತ್ತೇವೆ ಎಂದು ಕಂಪನಿ ಹೇಳಿದೆ.
ಕಂಪನಿಯು ತನ್ನ ವಿತರಕರ ಸಹಭಾಗಿತ್ವದಲ್ಲಿ ಈ ಡ್ರೈವಿಂಗ್ ಸ್ಕೂಲ್ಗಳನ್ನು ಸ್ಥಾಪಿಸಿದೆ. ಅಂತಾರಾಷ್ಟ್ರೀಯ ಉತ್ತಮ ಚಾಲನಾ ಅಭ್ಯಾಸಗಳ ಆಧಾರದ ಮೇಲೆ ಸಿದ್ಧಾಂತ ಮತ್ತು ಪ್ರಾಯೋಗಿಕ ತರಬೇತಿಯೊಂದಿಗೆ ವಿನ್ಯಾಸಗೊಳಿಸಿದ ಡ್ರೈವಿಂಗ್ ಕೋರ್ಸ್‌ಗಳನ್ನು ಸಹ ನೀಡುತ್ತದೆ.