alex Certify Big News: 2024 ರ ಸಂಕ್ರಾಂತಿಯಂದು ʼಅಯೋಧ್ಯಾ ರಾಮ ಮಂದಿರʼ ಲೋಕಾರ್ಪಣೆಗೆ ಶುಭ ಮುಹೂರ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: 2024 ರ ಸಂಕ್ರಾಂತಿಯಂದು ʼಅಯೋಧ್ಯಾ ರಾಮ ಮಂದಿರʼ ಲೋಕಾರ್ಪಣೆಗೆ ಶುಭ ಮುಹೂರ್ತ

ಉತ್ತರ ಪ್ರದೇಶದ ಅಯೋಧ್ಯಾ ನಗರ ಶ್ರೀರಾಮನ ಜನ್ಮಸ್ಥಳವೆಂಬ ಪ್ರತೀತಿ ಇದೆ. ಹಾಗಾಗಿಯೇ ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣವಾಗ್ತಿದೆ. 2024 ರ ಸಂಕ್ರಾಂತಿಯಂದು ರಾಮ ಮಂದಿರವನ್ನು ಉದ್ಘಾಟಿಸುವ ಸಾಧ್ಯತೆ ಇದೆ. ಈ ಬಗ್ಗೆ ರಾಮ ಜನ್ಮಭೂಮಿ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾಹಿತಿ ನೀಡಿದ್ದಾರೆ.

2023ರ ಅಂತ್ಯದ ವೇಳೆಗೆ ರಾಮ ಜನ್ಮಭೂಮಿ ದೇವಸ್ಥಾನ ಉದ್ಘಾಟನೆಯಾಗಲಿದೆ ಎಂದು ಹೇಳಿದ್ದೆ, ಆದ್ರೆ ಸೂರ್ಯ ದಕ್ಷಿಣಾಯಣದಲ್ಲಿ ಇರುವುದರಿಂದ ಆ ಸಮಯದಲ್ಲಿ ದಿನಾಂಕಗಳನ್ನು ಅಂತಿಮಗೊಳಿಸಲಾಗುವುದಿಲ್ಲ. ಹಾಗಾಗಿ ಸೂರ್ಯ ಉತ್ತರಾಯಣ ಪ್ರವೇಶಿಸಿದಾಗ ಮಕರ ಸಂಕ್ರಾಂತಿಯಂದು ಭವ್ಯವಾದ ದೇವಾಲಯವನ್ನು ಲೋಕಾರ್ಪಣೆ ಮಾಡುವ ಉದ್ದೇಶವಿದೆ. ಇದು ಮಂಗಳಕರ ಸಂದರ್ಭವೆಂದು ಪರಿಗಣಿಸಲಾಗಿದೆ. ತಾಂತ್ರಿಕವಾಗಿ ಜನವರಿ 14ರ ಮೊದಲು ಯಾವುದೇ ದಿನ ಹಿಂದಿನ ವರ್ಷದ ಕೊನೆಯ ದಿನವಾಗಿದೆ ಎಂದು ರೈ ಹೇಳಿದ್ದಾರೆ.

ಭಗವಾನ್ ರಾಮನು ತನ್ನ ಮೂಲ ಸ್ಥಾನದಲ್ಲಿ ಕೂರುವ ದಿನ ಕೂಡ ಅದೇ ಆಗಿದೆ ಅಂತಾ ರೈ ಮಾಹಿತಿ ನೀಡಿದ್ದಾರೆ. ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಆರು ಅಡಿ ಎತ್ತರದ ಪೀಠ ಈಗಾಗ್ಲೇ ಸಿದ್ಧವಾಗಿದೆ. ಫೌಂಡೇಶನ್‌ ಹಾಗೂ ಇತರ ಕೆಲಸಗಳು ಮುಗಿಯುತ್ತಿದ್ದಂತೆ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಮಂದಿರಕ್ಕಾಗಿ ಕಲ್ಲುಗಳ ಕೆತ್ತನೆ ಕಾರ್ಯ ಕೂಡ ನಡೆಯುತ್ತಿದೆ. 2020ರಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಅಡಿಗಲ್ಲು ಹಾಕಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...