ಸದ್ಯ ದೇಶಾದ್ಯಂತ 5ಜಿ ಸೇವೆಗಳ ಸದ್ದು ಜೋರಾಗಿದ್ದು, ಸರ್ಕಾರಿ ಸ್ವಾಮ್ಯದ BSNL 2024 ರಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
TCS ಮತ್ತು C-DOT ನೇತೃತ್ವದ ಒಕ್ಕೂಟವನ್ನು BSNL ತನ್ನ 4G ನೆಟ್ವರ್ಕ್ ಅನ್ನು ಹೊರತರಲು ಆಯ್ಕೆ ಮಾಡಿದೆ. ಒಪ್ಪಂದದ ಅಡಿಯಲ್ಲಿ ಆದೇಶ ಜಾರಿಗೊಳಿಸಿದ ನಂತರ ಸುಮಾರು ಒಂದು ವರ್ಷದಲ್ಲಿ 5G ಗೆ ಅಪ್ಗ್ರೇಡ್ ಮಾಡಲಾಗುವುದು. ಬಿಎಸ್ಎನ್ಎಲ್ 2024 ರಲ್ಲಿ 5G ಸೇವೆಗಳನ್ನು ಪ್ರಾರಂಭಿಸುತ್ತದೆ ಎಂದು ಸಚಿವ ಅಶ್ವಿನಿವೈಷ್ಣವ್ ಒಡಿಶಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಒಡಿಶಾದಲ್ಲಿ ಜಿಯೋ ಮತ್ತು ಏರ್ಟೆಲ್ನ 5 ಜಿ ಸೇವೆಗಳನ್ನು ಪ್ರಾರಂಭಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸೇವೆಗಳಿಗೆ ಚಾಲನೆ ನೀಡಿದರು.
ಇಡೀ ಒಡಿಶಾ 2 ವರ್ಷಗಳಲ್ಲಿ 5G ಸೇವೆಗಳ ವ್ಯಾಪ್ತಿಗೆ ಬರಲಿದೆ. ಇಂದು ಭುವನೇಶ್ವರ ಮತ್ತು ಕಟಕ್ನಲ್ಲಿ 5ಜಿ ಸೇವೆಗಳನ್ನು ಆರಂಭಿಸಲಾಗಿದೆ ಎಂದು ದೂರಸಂಪರ್ಕ ಸಚಿವರು ತಿಳಿಸಿದ್ದಾರೆ.
ಜನವರಿ 26 ರ ಮೊದಲು ಅವರು ರಾಜ್ಯದಾದ್ಯಂತ 5G ಸೇವೆಗಳನ್ನು ಪರಿಚಯಿಸುವ ಭರವಸೆ ನೀಡಿದರು.
ಒಡಿಶಾದ 100 ಹಳ್ಳಿಗಳನ್ನು ಒಳಗೊಂಡ 4G ಸೇವೆಗಳಿಗಾಗಿ 100 ಟವರ್ಗಳನ್ನು ಇಂದು ಪ್ರಾರಂಭಿಸಲಾಗಿದೆ” ಎಂದು ಅವರು ಹೇಳಿದರು.
2022-23ರ ಆರ್ಥಿಕ ವರ್ಷದಲ್ಲಿ ಒಡಿಶಾದಲ್ಲಿ ಟೆಲಿಕಾಂ ಸೇವೆಗಳಿಗಾಗಿ ಮೋದಿ ಸರ್ಕಾರ ಒಟ್ಟು 5,600 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಮತ್ತು 2023 ರ ಜನವರಿ 26 ರಂದು ಗಣರಾಜ್ಯೋತ್ಸವದ ಮೊದಲು ರಾಜ್ಯದಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.