ಬೆಳಗಾವಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ವಿಧಾನಸಭೆಯಲ್ಲಿ 2022-23ನೇ ಸಾಲಿನ ಪೂರಕ ಬಜೆಟ್ ಮಂಡಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಕೊನೆ ದಿನವಾದ ಇಂದು ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಪೂರಕ ಬಜೆಟ್ ಮಂಡಿಸಿದ್ದಾರೆ. 8,001.13 ಕೋಟಿ ರೂಪಾಯಿ ಪೂರಕ ಅಂದಾಜು ಬಜೆಟ್ ಮಂಡಿಸಿದರು.
ವಿಪತ್ತು ನಿರ್ವಹಣೆಗೆ 1,396 ಕೋಟಿ ರೂ ಮೀಸಲು, ಇಂಧನ ಸೆಕ್ಟರ್ ನಲ್ಲಿ ಈಕ್ವಿಟಿ ಖರೀದಿಗೆ 500 ಕೋಟಿ, ಜನರಲ್ ಅಸೆಂಬ್ಲಿ ಚುನಾವಣೆಗೆ 300 ಕೋಟಿ, ಮನೇಗ್ರಾ ಯೋಜನೆಗೆ 750 ಕೋಟಿ, ರಾಜೀವ್ ಗಾಂಧಿ ಹೌಸಿಂಗ್ ಸೊಸೈಟಿ ಸ್ಕಿಂಗೆ 256 ಕೋಟಿ ರೂ, ರೈಲ್ವೆ ಯೋಜನೆಗೆ 250 ಕೋಟಿ, ನೀರಾವರಿ ಯೋಜನೆಗೆ 200 ಕೋಟಿ, 5 ಮೆಗಾ ಹಾಸ್ಟೇಲ್ ಗಳ ನಿರ್ಮಾಣಕ್ಕೆ 200 ಕೋಟಿ ಹಾಗೂ ಬಿಬಿಎಂಪಿಗೆ 2000 ಕೋಟಿ ಮೀಸಲಿಡಲಾಗಿದೆ.