alex Certify BIG NEWS: 2022 ಕ್ಕಿಂತ್ಲೂ ಭಯಾನಕವಾಗಿದೆ 2023 ರ ಬಗ್ಗೆ ಬಾಬಾ ವಂಗಾ ನುಡಿದಿರೋ ಭವಿಷ್ಯ..! ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 2022 ಕ್ಕಿಂತ್ಲೂ ಭಯಾನಕವಾಗಿದೆ 2023 ರ ಬಗ್ಗೆ ಬಾಬಾ ವಂಗಾ ನುಡಿದಿರೋ ಭವಿಷ್ಯ..! ಇಲ್ಲಿದೆ ವಿವರ

ಬಾಬಾ ವಂಗಾ ನುಡಿದಿದ್ದ ಸಾಕಷ್ಟು ಭವಿಷ್ಯವಾಣಿಗಳು ಈಗಾಗ್ಲೇ ನಿಜವಾಗಿವೆ. ಮುಂಬರುವ ದಶಕ ಹಾಗೂ ಶತಮಾನಗಳಲ್ಲಿ ಏನೇನು ಸಂಭವಿಸಬಹುದು ಎಂಬ ಬಗ್ಗೆಯೂ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

ಇವುಗಳಲ್ಲಿ ಒಂದು ಪ್ರಪಂಚದ ಅಂತ್ಯಕ್ಕೆ ಸಂಬಂಧಿಸಿದೆ. ಹಾಗಾಗಿ ಪ್ರಪಂಚದ ಅಂತ್ಯ ಅಥವಾ ಬೃಹತ್ ವಿನಾಶದ ಮುನ್ಸೂಚನೆಗಳ ಬಗ್ಗೆ ಭಯ ಮೂಡಿದೆ. ಬಾಬಾ ವಂಗಾ 2023 ರಲ್ಲಿ ಸಂಭವಿಸಬಹುದಾದ ಘಟನೆಗಳ ಬಗ್ಗೆಯೂ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಈ ಐದು ಭವಿಷ್ಯವಾಣಿಗಳೇನಾದ್ರೂ ನಿಜವಾದ್ರೆ ಜಗತ್ತೇ ತಲೆಕೆಳಗಾಗುತ್ತದೆ.

1. ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ 2023ರಲ್ಲಿ ಒಂದು ದೊಡ್ಡ ದೇಶವು ಜೈವಿಕ ಶಸ್ತ್ರಾಸ್ತ್ರಗಳಿಂದ ಜನರ ಮೇಲೆ ದಾಳಿ ಮಾಡುತ್ತದೆ. ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ರಷ್ಯಾ-ಉಕ್ರೇನ್ ಯುದ್ಧವು ಇಡೀ ಜಗತ್ತಿಗೆ ನಿಜವಾದ ಬೆದರಿಕೆಯಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್‌ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಹಲವಾರು ಬಾರಿ ಬೆದರಿಕೆ ಹಾಕಿದ್ದಾರೆ.

2. ಬಾಬಾ ವಂಗಾ ಪ್ರಕಾರ, ಸೌರ ಚಂಡಮಾರುತ ಅಥವಾ ಸೌರ ಸುನಾಮಿ 2023 ರಲ್ಲಿ ಸಂಭವಿಸುತ್ತದೆ. ಇದು ಗ್ರಹದ ಕಾಂತೀಯ ಗುರಾಣಿಯನ್ನು ತೀವ್ರವಾಗಿ ಹಾನಿಗೊಳಿಸುತ್ತದೆ.

3. 2023ರಲ್ಲಿ ಇಡೀ ಜಗತ್ತು ಕತ್ತಲೆಯಲ್ಲಿ ಮುಳುಗುತ್ತದೆ ಅಂತಾ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಅನ್ಯ ಗ್ರಹ ಜೀವಿಗಳು ಭೂಮಿಯ ಮೇಲೆ ದಾಳಿ ಮಾಡಬಹುದು ಮತ್ತು ಲಕ್ಷಾಂತರ ಜನರು ಅದರಲ್ಲಿ ಸಾಯುತ್ತಾರೆ ಅಂತಾ ಆಕೆ ಹೇಳಿದ್ದಾರೆ.

4. ಇನ್ನು 2023ರಲ್ಲಿ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಬಹುದು. ಇದರಿಂದಾಗಿ ವಿಷಕಾರಿ ಮೋಡಗಳು ಏಷ್ಯಾ ಖಂಡವನ್ನು ಆವರಿಸುತ್ತವೆ, ಇದರ ಪರಿಣಾಮವಾಗಿ ಅನೇಕ ದೇಶಗಳು ಗಂಭೀರ ಕಾಯಿಲೆಗಳಿಂದ ಪ್ರಭಾವಿತವಾಗುತ್ತವೆ ಎಂದು ಕೂಡ ಬಾಬಾ ವಂಗಾ ಹೇಳಿದ್ದಾರೆ.

5. 2023ರ ಹೊತ್ತಿಗೆ ಮಾನವರು ಪ್ರಯೋಗಾಲಯಗಳಲ್ಲಿ ಜನಿಸುತ್ತಾರೆ ಎಂಬುದು ಬಾಬಾ ವಂಗಾ ನುಡಿದಿರೋ ಭವಿಷ್ಯ. ಪ್ರಯೋಗಾಲಯದಲ್ಲೇ ಜನರ ಪಾತ್ರ ಮತ್ತು ಚರ್ಮದ ಬಣ್ಣ ನಿರ್ಧರಿಸಲಾಗುತ್ತದೆ. ಇದರರ್ಥ ಜನನ ಪ್ರಕ್ರಿಯೆಯು ಸಂಪೂರ್ಣವಾಗಿ ನಿಯಂತ್ರಿಸಲ್ಪಡುತ್ತದೆ.

2022ರಲ್ಲಿ ಏನೇನು ಘಟನೆಗಳು ಸಂಭವಿಸಬಹುದು ಎಂಬ ಬಗ್ಗೆ ಬಾಬಾ ವಂಗಾ ನುಡಿದಿದ್ದ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಕೆಲವು ದೇಶಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಲಿದೆ ಎಂದಿದ್ದರು ಆಕೆ. ಪ್ರವಾಹದಿಂದ ಅನೇಕ ರಾಷ್ಟ್ರಗಳು ಸಂಕಷ್ಟಕ್ಕೀಡಾಗುವ ಬಗ್ಗೆಯೂ ಹೇಳಿದ್ದರು. ಅದೇ ರೀತಿ ಪೋರ್ಚುಗಲ್ ಮತ್ತು ಇಟಲಿಯ ಅನೇಕ ಪ್ರದೇಶಗಳಲ್ಲಿ ಬರಗಾಲವಿದೆ. ಆಸ್ಟ್ರೇಲಿಯಾ ಮತ್ತು ಏಷ್ಯಾದ ದೇಶಗಳು 2022ರಲ್ಲಿ ತೀವ್ರ ಪ್ರವಾಹವನ್ನು ಎದುರಿಸಿವೆ.

ಬಾಬಾ ವಂಗಾ 1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದರು. ಆಕೆಯ ನಿಜವಾದ ಹೆಸರು ವಂಜೆಲಿಯಾ ಪಾಂಡೆವಾ ಗುಶ್ಟೆರೋವಾ.  ಬಾಲ್ಯದಲ್ಲಿಯೇ ಆಕೆ ದೃಷ್ಟಿ ಕಳೆದುಕೊಂಡಿದ್ದರು. ದೃಷ್ಟಿ ಕಳೆದುಕೊಂಡ ಬಳಿಕ ತನ್ನಲ್ಲಿ ಅತೀಂದ್ರಿಯ ಶಕ್ತಿ ಮೂಡಿದೆ ಎನ್ನುತ್ತಿದ್ದ ಆಕೆ ಸಾಕಷ್ಟು ಭವಿಷ್ಯವಾಣಿಗಳು ಹೇಳಿದ್ದಾರೆ. 1996ರಲ್ಲಿ ಸಾವಿಗೂ ಮೊದಲು ಆಕೆ ನುಡಿದಿರುವ ಭವಿಷ್ಯವೆಲ್ಲ ಬಹುತೇಕ ನಿಜವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...