ನವದೆಹಲಿ: ದೆಹಲಿಯ ಹಿಂದಿನ ಆಮ್ ಆದ್ಮಿ ಪಕ್ಷದ ನೇತೃತ್ವದ ಸರ್ಕಾರವು ಈಗ ರದ್ದುಪಡಿಸಿದ ಮದ್ಯ ನೀತಿಯನ್ನು ಜಾರಿಗೆ ತಂದಿದ್ದರಿಂದ 2,002 ಕೋಟಿ ರೂ.ಗಳ ಆದಾಯ ನಷ್ಟವಾಗಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (ಸಿಎಜಿ) ವರದಿ ಬಹಿರಂಗಪಡಿಸಿದೆ.
ಎಎಪಿ ಶಾಸಕರ ಕೋಲಾಹಲದ ಹೊರತಾಗಿಯೂ ಮುಖ್ಯsಮಂತ್ರಿ ರೇಖಾ ಗುಪ್ತಾ ಅವರು ಇಂದು ದೆಹಲಿ ವಿಧಾನಸಭೆಯಲ್ಲಿ ವರದಿಯನ್ನು ಮಂಡಿಸಿದರು.
14 ಸಿಎಜಿ ವರದಿಗಳ ‘ದೆಹಲಿಯಲ್ಲಿ ಮದ್ಯ ನಿಯಂತ್ರಣ ಮತ್ತು ಪೂರೈಕೆಯ ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆ’ ವರದಿಯನ್ನು ಬಿಜೆಪಿ ಸರ್ಕಾರ ಮಂಡಿಸುತ್ತಿದ್ದಂತೆ ದೆಹಲಿ ವಿಧಾನಸಭೆ ಎರಡನೇ ದಿನದ ಆರಂಭದಲ್ಲಿಯೇ ಪ್ರತಿಪಕ್ಷಗಳಿಂದ ಕೋಲಾಹಲಕ್ಕೆ ಸಾಕ್ಷಿಯಾಯಿತು.