ಬೆಳಗಾವಿ: 2 ವರ್ಷದ ಮಗುವಿನೊಂದಿಗೆ ತಾಯಿಯೊಬ್ಬರು ಮಲಪ್ರಭಾ ನದಿಗೆ ಹಾರಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನಡೆದಿದೆ.
ಇಲ್ಲಿನ ವೆಂಕಟೇಶ್ವರ ದೇವಸ್ಥಾನದ ಬಳಿ ಮಲಪ್ರಭಾ ನದಿಗೆ ತಾಯಿಯೊಬ್ಬಳು ತನ್ನ ಪುಟ್ಟ ಮಗನೊಂದಿಗೆ ಹಾರಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎರಡು ವರ್ಷದ ಮಗು ಶಿವಲಿಂಗಯ್ಯ ಹಾಗೂ ಮಹಿಳೆ ರುದ್ರವ್ವ ನದಿಗೆ ಹಾರಿದವರು.
ನದಿ ದಡದಲ್ಲಿ ಚಪ್ಪಲಿ ತೆಗೆದಿಟ್ಟಿರುವ ಮಹಿಳೆ ನದಿಗೆ ಹಾರಿದ್ದು, ದಡದಲ್ಲಿರುವ ಚಪ್ಪಲಿ ತನ್ನ ಪತ್ನಿ ರುದ್ರವ್ವಳದ್ದು ಎಂದು ಆಕೆಯ ಪತಿ ಬಸವರಾಜು ಗುರುತಿಸಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ತಾಯಿ ಮಗುವಿಗಾಗಿ ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ.