ಬೆಂಗಳೂರು: ವಿಧಾನಸೌಧ ಚುನಾವಣೆ ಸಮೀಪಿಸುತ್ತಿದ್ದಂತೆ ರೌಡಿ ರಾಜಕೀಯ ಆಡಳಿತ ಹಾಗೂ ವಿಪಕ್ಷಗಳ ಕೆಸರೆರಚಾಟಕ್ಕೆ ಕಾರಣವಾಗಿದೆ. ಬಿಜೆಪಿಗೂ ರೌಡಿಗಳಿಗೂ ಹಳೆಯ ಸಂಬಂಧವಿದೆ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಕಲ್ಬುರ್ಗಿಯಲ್ಲಿ ಬಿಜೆಪಿ ಸೇರಿದ್ದ ಮತ್ತೊಬ್ಬ ರೌಡಿ ಶೀಟರ್‌ಗೆ ಪೊಲೀಸರೊಂದಿಗೆ ಇರುವ ಹಣಕಾಸಿನ ವ್ಯವಹರವೇನು? ರೌಡಿ ಶೀಟರ್‌ಗಳನ್ನು ಹಾಗೂ ಪೊಲೀಸರನ್ನು ಹಫ್ತಾ ವಸೂಲಿಗೆ ಬಳಸಿ ಕೊಳ್ಳುತ್ತಿದೆಯೇ ಬಿಜೆಪಿ? ಸಿಎಂ ಬೊಮ್ಮಾಯಿ ಅವರೇ, ರೌಡಿಗಳನ್ನು ಪ್ರೋತ್ಸಾಹಿಸುತ್ತಿರುವ ತಮ್ಮದು ಯಾವ ಸೀಮೆಯ ನೈತಿಕತೆ? ಎಂದು ಪ್ರಶ್ನಿಸಿದೆ.
ಸಂಸ್ಕಾರಿ ಪಕ್ಷದ ನಾಯಕರು ರೌಡಿಯೊಬ್ಬನನ್ನು ಗೋಮೂತ್ರ ಪ್ರೋಕ್ಷಣೆ ಮಾಡಿ ಪಕ್ಕದಲ್ಲಿ ನಿಲ್ಲಿಸಿಕೊಂಡಿದ್ದಾರಾ? ಯಾದಗಿರಿಯಿಂದ ಗಡಿಪಾರು, ಕಲ್ಬುರ್ಗಿಯಿಂದ ಗಡಿಪಾರು, 2 ಮರ್ಡರ್ ಕೇಸ್‌ಗಳು, 30ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್‌ಗಳು, ಅನ್ನಭಾಗ್ಯದ ಅಕ್ಕಿ ಕಳ್ಳತನದ ಕೇಸ್‌ಗಳು ಇರುವ ರೌಡಿ ಬಿಜೆಪಿಗೆ ಬೇಕಾದ ಎಲ್ಲಾ ಅರ್ಹತೆ ಪಡೆದಿದ್ದಾನೆಯೇ? ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಟೀಕಿಸಿದೆ.