ಹೈದರಾಬಾದ್: ಸಿನಿಮಾಗಳಿಗೆ ನಕಲಿ ನೋಟು ಪೂರೈಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, 2 ಕೋಟಿ ನಕಲಿ ನೋಟುಗಳನ್ನು ಜಪ್ತಿ ಮಾಡಿರುವ ಘಟನೆ ಹೈದರಾಬಾದ್ ನ ಗೋಲ್ಕಂಡದಲ್ಲಿ ನಡೆದಿದೆ.
ಸಿನಿಮಾ ತೆಗೆಯಲು ಸಾಲ ಕೇಳಿದ್ದಕ್ಕಾಗಿ ಲಕ್ಷ್ಮಿ ಎಂಬುವವರಿಗೆ ಆರೋಪಿಗಳು ನಕಲಿ ನೋಟುಗಳನ್ನು ನೀಡಿ ವಂಚಿಸಲು ಯತ್ನಿಸಿದ್ದರು. ಈ ವೇಳೆ ದಾಳಿ ನಡೆಸಿದ ಪೊಲೀಸರು ನಕಲಿ ನೋಟು ಸಮೇತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಟ್ರಾಫಿಕ್ ಕ್ಯಾಮರಾ ದಿಟ್ಟಿಸಿದ ಗಿಳಿ: ಕ್ಯೂಟ್ ವಿಡಿಯೋ ವೈರಲ್
ಸುದರ್ಶನ್ ಹಾಗೂ ಇನ್ನೋರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.