ರಾಜ್ಯ ರಾಜಧಾನಿ ಬೆಂಗಳೂರು ಮಳೆ ಅಬ್ಬರದಿಂದ ತತ್ತರಿಸಿ ಹೋಗಿದೆ. ಬಡಾವಣೆಗಳು ಜಲಾವೃತವಾಗಿದ್ದು, ಜನ ಮನೆಯಿಂದ ಹೊರಬರಲು ಕಷ್ಟಕರವಾಗುವಂತಾಗಿದೆ. ಪ್ರಮುಖ ರಸ್ತೆಗಳು ಕೆರೆಗಳಂತಾಗಿದ್ದು ವಾಹನ ಸವಾರರು ಪ್ರಯಾಸದಿಂದ ಪ್ರಯಾಣಿಸಬೇಕಾಗಿದೆ.
ಇನ್ನು ಅಪಾರ್ಟ್ಮೆಂಟ್ ಗಳ ಬೇಸ್ಮೆಂಟ್ ನಲ್ಲಿ ನೀರು ತುಂಬಿರುವ ಕಾರಣ ವಾಹನಗಳು ಹಾಳಾಗಿವೆ. ಕೆಲವೆಡೆಯಂತೂ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಹಬ್ಬ ಮಾಡುವುದನ್ನು ಬಿಟ್ಟು ಜನ ಮನೆಯಿಂದ ನೀರು ತೆಗೆಯುವ ಕೆಲಸ ಮಾಡಿದ್ದಾರೆ.
ಇದರ ಮಧ್ಯೆ ಭಾರತೀಯ ಹವಾಮಾನ ಇಲಾಖೆ ಮಹತ್ವದ ಮಾಹಿತಿ ಒಂದನ್ನು ನೀಡಿದ್ದು, ಮಂಗಳವಾರದಂದು ಬೆಂಗಳೂರು ನಗರ ಪ್ರದೇಶದಲ್ಲಿ 162.1 ಮಿಲಿಮೀಟರ್ ಮಳೆಯಾಗಿದ್ದು, 1890 ಆಗಸ್ಟ್ 27ರ ಬಳಿಕ ಅತಿ ಹೆಚ್ಚು ಮಳೆಯಾದಂತಾಗಿದೆ. ಅಲ್ಲದೆ ಬುಧವಾರ ಹಾಗೂ ಗುರುವಾರದೊಂದು ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ.