ಬೆಂಗಳೂರು: ಮುಷ್ಕರಕ್ಕೆ ಮುಂದಾಗಿದ್ದ 108 ಆಬುಲೆನ್ಸ್ ಸಿಬ್ಬಂದಿಗಳಿಗೆ ಶೀಘ್ರವೇ ವೇತನ ನೀಡುವುದಾಗಿ ಜಿವಿಕೆ ಸಂಸ್ಥೆ ಭರವಸೆ ನೀಡಿದೆ.
ಆರೋಗ್ಯ ಸೌಧದಲ್ಲಿ ಇಲಾಖೆ ಆಯುಕ್ತರ ಜೊತೆ 108 ಆಂಬುಲೆನ್ಸ್ ಸಿಬ್ಬಂದಿಗಳ ನೌಕರರ ಸಂಘ, ಜಿವಿಕೆ ಸಂಸ್ಥೆ ನಡೆಸಿದ ಸಭೆಯಲ್ಲಿ ಒಂದು ವಾರದೊಳಗಾಗಿ 108 ಆಂಬುಲೆನ್ಸ್ ಸಿಬ್ಬಂದಿಗಳಿಗೆ ವೇತನ ನೀಡುವುದಾಗಿ ಸಂಸ್ಥೆ ತಿಳಿಸಿದೆ.
ಕಳೆದ ಎರಡು ತಿಂಗಳಿಂದ ವೇತನ ಪಾವತಿಸದ ಹಿನ್ನೆಲೆಯಲ್ಲಿ 108 ಆಂಬುಲೆನ್ಸ್ ಸಿಬ್ಬಂದಿಗಳು ಮುಷ್ಕರಕ್ಕೆ ಮುಂದಾಗಿದ್ದರು. ಅಲ್ಲದೇ ಸಾಮೂಹಿಕ ರಜೆಯ ಮೇಲೆ ತೆರಳುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಇಂದು ಜಿವಿಕೆ ಸಂಸ್ಥೆ ಹಾಗೂ ಆಂಬುಲೆನ್ಸ್ ನೌಕರರ ಸಂಘದ ಜೊತೆ ಸಭೆ ನಡೆಸಿತ್ತು.