ಬೆಂಗಳೂರು: ಕೋವಿಡ್ ನಿಯಂತ್ರಣ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಗೆದ್ದಿದೆ. ವ್ಯಾಕ್ಸಿನ್ ಎಲ್ಲಿ ಮೋದಿಜಿ ಎಂದು ಕೇಳುತ್ತಿದ್ದ ವಿಪಕ್ಷಗಳಿಗೆ ಮಾತ್ರವಲ್ಲ ಜಗತ್ತಿಗೆ ಭಾರತ ಉತ್ತರ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ.
ಭಾರತ ಲಸಿಕೆ ಅಭಿಯಾನದಲ್ಲಿ ಹೊಸ ದಾಖಲೆ ಬರೆದಿದ್ದು, 100 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಿಕೆ ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಿ.ಟಿ. ರವಿ ದೇಶದಲ್ಲಿ ಮೂರು ವಿಧದ ವ್ಯಾಕ್ಸಿನ್ ಕಂಡು ಹಿಡಿದ ವಿಜ್ಞಾನಿಗಳಿಗೆ, ವ್ಯಾಕ್ಸಿನ್ ನೀಡಲು ಸಹಕರಿಸಿದ ವೈದ್ಯರು, ದಾದಿಯರಿಗೆ ಹಾಗೂ ವಿಶೇಷವಾಗಿ ಕೋವಿಡ್ ವ್ಯಾಕ್ಸಿನೇಷನ್ ನೇತೃತ್ವ ವಹಿಸಿದ ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು ಎಂದರು.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ’ಟೆಸ್ಟ್ ಡ್ರೈವ್ ’ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಡಿಟೇಲ್ಸ್
ಜಗತ್ತಿನ ಯಾವ ದೇಶವೂ ಸಾಧಿಸದ ವಿಕ್ರಮವನ್ನು ಭಾರತ ಇಂದು ಸಾಧಿಸಿದೆ. ಕೋವಿಡ್ ವ್ಯಾಕ್ಸಿನ್ ಬಗ್ಗೆ ವಿಪಕ್ಷಗಳು ಅಪಪ್ರಚಾರ ಮಾಡಿದ್ದವು, ವ್ಯಾಕ್ಸಿನ್ ಹಾಕಿಸಿಕೊಳ್ಳಬೇಡಿ, ಹಾಕಿಸಿಕೊಂಡರೆ ಮಕ್ಕಳಾಗಲ್ಲ, ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿ ಪ್ರಧಾನಿ ಮೋದಿ ಲಸಿಕೆ ನೀಡುತ್ತಿದ್ದಾರೆ ಎಂದೆಲ್ಲ ಆರೋಪಗಳನ್ನು ಮಾಡಿದರು. ಆದರೆ ಈ ಅಪಪ್ರಚಾರದ ನಡುವೆ ವಿಶ್ವಾಸ ಗೆದ್ದಿದೆ. ಜನರ ಕಣ್ಣಿಗೆ ಮಣ್ಣೆರಚುವ ಕಾಂಗ್ರೆಸ್ ಹಾಗೂ ವಿಪಕ್ಷಗಳಿಗೆ ಕಾಯಕದ ಮೂಲಕ ಪ್ರಧಾನಿ ಉತ್ತರ ಕೊಟ್ಟಿದ್ದಾರೆ. ಯಶಸ್ವಿ ಲಸಿಕಾ ಅಭಿಯಾನದ ಮೂಲಕ ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಮತ್ತೊಂದು ವಿಶ್ವದಾಖಲೆ ಮಾಡಿದೆ ಎಂದು ಹೇಳಿದರು.