ವಿಜಯಪುರ: ಈ ಬಾರಿ ಗಣೇಶೋತ್ಸವಕ್ಕೆ ಕೋವಿಡ್ ಕಾರಣ ಹೇಳಿ ತೊಂದರೆ ಮಾಡಿದರೆ ನಾವು ಸುಮ್ಮನಿರಲು ಸಾಧ್ಯವಿಲ್ಲ. ರಾಜಕಾರಣಿಗಳ ಸಭೆ-ಸಮಾರಂಭ, ಸಚಿವರ ಸಂಭ್ರಮಾಚರಣೆಗಳಿಗೆ ಇಲ್ಲದ ಕೋವಿಡ್ ನಿಯಮಗಳನ್ನು ಗಣೇಶ ಹಬ್ಬ ಆಚರಿಸಲು ಮಾಡುವುದು ಏಕೆ ? ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
10 ಸಾವಿರ ಜನರನ್ನು ಸೇರಿಸಿ ನೀವು ಸಭೆ ಮಾಡುತ್ತಿದ್ದೀರ. ಗಣೇಶೋತ್ಸವ ಆಚರಣೆಗೆ ಮಾತ್ರ 50 ಕಂಡಿಷನ್ ಹಾಕಿದ್ದಾರೆ. ಗಣಪತಿ ಹಬ್ಬ ಬಂದಾಗ ಮಾತ್ರ ಕೊರೊನಾ ನೆನಪಾಗುತ್ತಾ ? ಈ ಬಗ್ಗೆ ನಾನು ಸಿಎಂ ಬೊಮ್ಮಾಯಿ ಜೊತೆ ಮಾತನಾಡಿದ್ದೇನೆ ಎಂದರು.
ರಕ್ಷಾಬಂಧನ ವಿಶೇಷ: ಬಾಲಿವುಡ್ ಸಹೋದರ – ಸಹೋದರಿಯರ ಕುರಿತು ಇಲ್ಲಿದೆ ಮಾಹಿತಿ
ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪಿಸಲು ಅಂಜಬೇಡಿ. ಗಣೇಶೋತ್ಸವ ಆಚರಿಸಲು ಯಾರೂ ಕೊರೊನಾಗೆ ಹೆದರಬೇಕಿಲ್ಲ. ಧಾರ್ಮಿಕ ಆಚರಣೆ ಅದರಲ್ಲೂ ಗಣೇಶ ಹಬ್ಬ ಆಚರಿಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಕ್ರಮ ಕೈಗೊಳ್ಳದಂತೆ ಸಿಎಂ ಡಿಸಿ, ಎಸ್ ಪಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಿದರು.