ಬೆಂಗಳೂರು: ವಸತಿ ಶಾಲೆಗಲಲ್ಲಿ ಆರ್ ಎಸ್ ಎಸ್ ಪ್ರಶಿಕ್ಷಣ ಶಿಬಿರ ಆಯೋಜನೆಗೆ ಅನುಮತಿ ನೀಡಿರುವುದು ರಾಜ್ಯದಲ್ಲಿ ಮತ್ತೊಂದು ವಿವಾದಕ್ಕೆ ಕಾರಣವಾಗುವ ಸಧ್ಯತೆ ಇದೆ. ಶಾಲೆಗಳಲ್ಲಿ ಆರ್ ಎಸ್ ಎಸ್ ಶಿಕ್ಷಣ ಶಿಬಿರ ಆಯೋಜನೆಗೆ ಭಾರಿ ವಿರೋಧ ವ್ಯಕ್ತವಾಗಿದೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಆರ್ ಎಸ್ ಎಸ್ ಪ್ರಶಿಕ್ಷಣ ಶಿಬಿರಕ್ಕೆ ಅನುಮತಿ ನೀಡಲಾಗಿದೆ. ಕೋಲಾರದ ಕೂತಾಂಡ್ಲಹಳ್ಳಿ ಬಳಿ ಇರುವ ವಸತಿ ಶಾಲೆಯಲ್ಲಿ ಶಿಬಿರಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅನುಮತಿ ನೀಡಿದ್ದಾರೆ.
ಆದರೆ ಅನುಮತಿ ಪತ್ರದಲ್ಲಿ ಆರ್ ಎಸ್ ಎಸ್ ಹೆಸರು ಉಲ್ಲೇಖವಿಲ್ಲ. ವ್ಯಕ್ತಿತ್ವ ವಿಕಸನ, ಯೋಗಾಸನ, ರಾಷ್ಟ್ರೀಯ ಚಿಂತನೆ ನಿಟ್ಟಿನಲ್ಲಿ ವಸತಿ ಶಾಲೆಗಳಲ್ಲಿ ಒಂದು ವಾರ ಶಿಬಿರ ನಡೆಸಲು ಅನುಮತಿ ನೀಡಲಾಗಿದೆ. ಇದಕ್ಕೆ ಎಸ್ ಎಫ್ ಐ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.