alex Certify Big News: ಹೊಸ ಕೊರೊನಾ ರೂಪಾಂತರಿ ಡೆಲ್ಟಾಕ್ರಾನ್‌ ಗೆ ಕರ್ನಾಟಕವೇ ಹಾಟ್‌ ಸ್ಪಾಟ್‌, 221 ಮಂದಿಗೆ ಸೋಂಕು ತಗುಲಿರೋ ಶಂಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಹೊಸ ಕೊರೊನಾ ರೂಪಾಂತರಿ ಡೆಲ್ಟಾಕ್ರಾನ್‌ ಗೆ ಕರ್ನಾಟಕವೇ ಹಾಟ್‌ ಸ್ಪಾಟ್‌, 221 ಮಂದಿಗೆ ಸೋಂಕು ತಗುಲಿರೋ ಶಂಕೆ…!   

ಭಾರತದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಕಡಿಮೆಯಾಗಿದ್ದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಈಗ ಕೋವಿಡ್ -19ನ ಹೊಸ ರೂಪಾಂತರಿ ದೇಶಕ್ಕೆ ಕಾಲಿಟ್ಟಿದೆ. ಡೆಲ್ಟಾ ಮತ್ತು ಓಮಿಕ್ರಾನ್ ಸಂಯೋಜನೆಯಿಂದ ಮಾಡಲ್ಪಟ್ಟಿರೋ ಈ ಹೊಸ ರೂಪಾಂತರಿ ಅನೇಕ ರಾಜ್ಯಗಳಲ್ಲಿ ಪತ್ತೆಯಾಗಿದೆ.

ದೇಶದಲ್ಲಿ 568 ಕೊರೊನಾ ಪ್ರಕರಣಗಳು ಹೊಸ ರೂಪಾಂತರಿಯ ಸೋಂಕು ಎಂಬ ಶಂಕೆ ವ್ಯಕ್ತವಾಗಿದ್ದು, ಸೋಂಕಿತರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿಯ ಪ್ರಕಾರ, ಕರ್ನಾಟಕದಲ್ಲಿ ಪತ್ತೆಯಾಗಿರುವ 221 ಪ್ರಕರಣಗಳಲ್ಲಿ ಡೆಲ್ಟಾಕ್ರಾನ್ ರೂಪಾಂತರಗಳ ಸೂಚನೆಗಳಿವೆ. ಹಾಗಾಗಿ ಕರ್ನಾಟಕವೇ ಡೆಲ್ಟಾಕ್ರಾನ್‌ ವೈರಸ್‌ ಗೆ ಹಾಟ್‌ ಸ್ಪಾಟ್‌ ಅಂತಾ ಹೇಳಲಾಗ್ತಿದೆ. ತಮಿಳುನಾಡಿನಲ್ಲಿ 90, ಮಹಾರಾಷ್ಟ್ರದಲ್ಲಿ 66, ಗುಜರಾತ್‌ನಲ್ಲಿ 33, ಪಶ್ಚಿಮ ಬಂಗಾಳದಲ್ಲಿ 32 ಮತ್ತು ತೆಲಂಗಾಣದಲ್ಲಿ 25 ಮತ್ತು ನವದೆಹಲಿಯಲ್ಲಿ 20 ಪ್ರಕರಣಗಳು ತನಿಖೆ ಹಂತದಲ್ಲಿವೆ.

ತಜ್ಞರ ಪ್ರಕಾರ ಡೆಲ್ಟಾಕ್ರಾನ್‌, ಸೂಪರ್ ಮ್ಯುಟೆಂಟ್ ವೈರಸ್. ಇದರ ವೈಜ್ಞಾನಿಕ ಹೆಸರು BA.1 + B.1.617.2. ಡೆಲ್ಟಾ ಮತ್ತು ಓಮಿಕ್ರಾನ್‌ನಿಂದ ಮಾಡಲ್ಪಟ್ಟ ಹೈಬ್ರಿಡ್ ಸ್ಟ್ರೈನ್ ಇದಾಗಿದೆ ಎಂದು ತಜ್ಞರು ಹೇಳಿದ್ದಾರೆ. ಕಳೆದ ತಿಂಗಳು ಸೈಪ್ರಸ್‌ನ ಸಂಶೋಧಕರು ಮೊದಲು ಇದನ್ನು ಪತ್ತೆ ಮಾಡಿದ್ದರು. ಆರಂಭದಲ್ಲಿ ಪ್ರಯೋಗಾಲಯದಲ್ಲಿನ ತಾಂತ್ರಿಕ ದೋಷ ಎಂದು ಪರಿಗಣಿಸಲಾಗಿತ್ತು. ಆದ್ರೆ ಬ್ರಿಟನ್‌ ನಲ್ಲಿ ಡೆಲ್ಟಾಕ್ರಾನ್‌ ಕೇಸ್‌ ಗಳು ಮೊದಲು ಬೆಳಕಿಗೆ ಬಂದಿವೆ. ಇದು ಕೂಡ ಕೊರೊನಾದ ಹೈಬ್ರಿಡ್‌ ರೂಪಾಂತರ ಅನ್ನೋದು ದೃಢಪಟ್ಟಿದೆ.

ಡೆಲ್ಟಾ ಮತ್ತು ಓಮಿಕ್ರಾನ್‌ನಿಂದ ಕೂಡಿದ ಈ ಹೊಸ ವೈರಸ್ ಎಷ್ಟು ಅಪಾಯಕಾರಿ ಎಂಬುದರ ಕುರಿತು ಅನೇಕ ಅಧ್ಯಯನಗಳು ನಡೆಯುತ್ತಿವೆ. ಈ ವೈರಸ್‌ ಏಕಾಏಕಿ ಫ್ರಾನ್ಸ್‌ನಲ್ಲಿ ಜನವರಿ ತಿಂಗಳಲ್ಲೇ ಕಾಣಿಸಿಕೊಂಡಿದೆ. ಫ್ರಾನ್ಸ್‌ ನಲ್ಲೇ ಮೊದಲ ಪ್ರಕರಣ ವರದಿಯಾಗಿದೆ. ಡೆಲ್ಟಾಕ್ರಾನ್‌ ಅತ್ಯಂತ ವೇಗವಾಗಿ ಹರಡುತ್ತಿದೆ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಕೂಡ ಎಚ್ಚರಿಕೆ ನೀಡಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...