ಚೆನ್ನೈ: ಹೊಸೂರು ಕೈಗಾರಿಕಾ ವಲಯದಲ್ಲಿ ವಿಮಾನ ನಿಲ್ದಾಣವೊಂದನ್ನು ಅಭಿವೃದ್ಧಿಪಡಿಸಲು ತಮಿಳುನಾಡು ಸರ್ಕಾರ ಆಸಕ್ತವಾಗಿದೆ ಎಂದು ಅಲ್ಲಿನ ಕೈಗಾರಿಕಾ ಸಚಿವ ತಂಗಂ ತೆನ್ನರಸು ತಿಳಿಸಿದ್ದಾರೆ. ಇದು ಕೃಷ್ಣಾಗಿರಿ ಜಿಲ್ಲೆಯಲ್ಲಿ ಬರುತ್ತಿದ್ದು, ಬೆಂಗಳೂರಿನಿಂದ ಕೇವಲ 40 ಕಿ.ಮಿ. ದೂರವಿರುವುದರಿಂದ ಕರ್ನಾಟಕಕ್ಕೂ ಅನುಕೂಲವಾಗಲಿದೆ.
ಹೊಸೂರು ಕೈಗಾರಿಕಾ ವಲಯದಲ್ಲಿ ವಿಮಾನ ನಿಲ್ದಾಣವೊಂದನ್ನು ಆರಂಭಿಸುವ ಯೋಜನೆಯ ಸಾಧಕ-ಬಾಧಕಗಳು, ಇರುವ ಬೇಡಿಕೆ ಹಾಗೂ ಅವಕಾಶಗಳು ಮತ್ತು ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ ಆಗುವ ಅನುಕೂಲಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ (TIDCO) ಸೂಚಿಸಿರುವುದಾಗಿ ಸಚಿವರು ಹೇಳಿದ್ದಾರೆ. ಈ ಅಧ್ಯಯನವನ್ನು ಕೈಗೊಳ್ಳುವ ಸಲಹೆಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಟಿಡ್ಕೋ ತೊಡಗಿಸಿಕೊಂಡಿದೆ.
ಮೂಲಂಗಿ ಪರೋಟ ತಯಾರಿಸುವ ವಿಧಾನ
“ಕೈಗಾರಿಕಾ ಅಭಿವೃದ್ಧಿ, ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ, ಪ್ರವಾಸೋದ್ಯಮ, ತಮಿಳುನಾಡಿನ ವಾಯವ್ಯ ಭಾಗದ ಜನರ ತಲಾ ಆದಾಯದಲ್ಲಿ ಹೆಚ್ಚಳ ಮತ್ತು ಪ್ರವಾಸದಲ್ಲಿ ಆಸಕ್ತಿ ಇವು ಈ ಪ್ರದೇಶದಲ್ಲಿ ವಿಮಾನ ನಿಲ್ದಾಣದ ಸ್ಥಾಪನೆಗೆ ಕಾರಣವಾಗುವ ಅಂಶಗಳಾಗಿವೆ” ಎಂದು ಕೈಗಾರಿಕಾ ಇಲಾಖೆಯು ವಿಧಾನಸಭೆಯಲ್ಲಿ ಮಂಡಿಸಿದ ನೀತಿ ಹೇಳಿಕೆಯು ತಿಳಿಸಿದೆ.
ನೈವೇಲಿಯಲ್ಲಿ ಉದ್ದೇಶಿತ ವಿಮಾನ ನಿಲ್ದಾಣದ ಕುರಿತಾಗಿಯೂ ಪ್ರಸ್ತಾವಿಸಿರುವ ಈ ಹೇಳಿಕೆ, ವಿಮಾನಗಳ ಹಾರಾಟದ ಕಾರ್ಯಾಚರಣೆಗೆ ಮೂಲಸೌಕರ್ಯಗಳ ಅಭಿವೃದ್ಧಿ ಪೂರ್ಣಗೊಂಡಿದ್ದು, ನಾಗರಿಕ ವಿಮಾನಯಾನದ ಮಹಾನಿರ್ದೇಶಕರ ಪರವಾನಿಗೆಯ ನಿರೀಕ್ಷೆಯಲ್ಲಿದ್ದೇವೆ. ಆಬಳಿಕ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಮಾಹಿತಿ ನೀಡಿದೆ.