ದಾವಣಗೆರೆ: ಕಾಂಗ್ರೆಸ್ ನವರಿಗೆ ಬೇಕಿರುವುದು ಜನರ ಹಿತವಲ್ಲ, ಅಧಿಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಹೊಸಕೋಟೆಯನ್ನು ಮಿನಿ ಬಿಹಾರ ಮಾಡ್ತಿದ್ದಾರೆ. ಕಾಂಗ್ರೆಸ್ ನವರು ಗೂಂಡಾರಾಜ್ಯ ಮಾಡ್ತಿದ್ದಾರೆ. ಒಂದು ತಾಲಿಬಾನ್ ಪಡೆ ಎದ್ದು ನಿಂತಿರುವುದು ನೋಡಿದಾಗ ಕಾಂಗ್ರೆಸ್ ಮನಸ್ಥಿತಿ ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಅಧಿಕಾರಕ್ಕಾಗಿ ಕಿತ್ತಾಟ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಗಾಗಿ ಕಿತ್ತಾಟ ನಡೆದಿದ್ದು, ಅವರನ್ನು ಸಮಾಧಾನ ಪಡಿಸೋದೇ ದೊಡ್ಡ ಕೆಲಸವಾಗಿದೆ. ಈಗಲೇ ರಾಜ್ಯದಲ್ಲಿ ಅರಾಜಕತೆ ಆರಂಭವಾಗಿದೆ. ಇವರಿಗೆ ಜನರ ಹಿತ ಬೇಕಾಗಿಲ್ಲ, ಅಧಿಕಾರ ಮಾತ್ರ ಬೇಕು ಎಂದು ಕಿಡಿಕಾರಿದರು.