ಕೇಬಲ್, ಹೈಟೆನ್ಷನ್ ವೈಯರ್ ಹರಿದು ಇಬ್ಬರು ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡಿದ್ದ ವ್ಯಕ್ತಿ, ವಿದ್ಯುತ್ ಕಂಪನಿ ಬೆಸ್ಕಾಂ ಹಾಗೂ ಭಾರ್ತಿ ಏರ್ಟೆಲ್ ವಿರುದ್ಧ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿರುವ ಪುಟ್ಟೇನಹಳ್ಳಿ ಪೊಲೀಸರು, ಈಗಾಗ್ಲೇ ಐಪಿಸಿ ಸೆಕ್ಷನ್ 41(a) ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಕಳುಹಿಸಿದ್ದಾರೆ. ಪುಟ್ಟೇನಹಳ್ಳಿ ಬೆಸ್ಕಾಂನ ಎಇಇ ಹಾಗೂ ಏರ್ಟೆಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪೊಲೀಸ್ ಠಾಣೆಗೆ ಹಾಜರಾಗಿ ಅವರ ಹೇಳಿಕೆ ನೀಡುವಂತೆ ನೋಟಿಸ್ ನೀಡಲಾಗಿದೆ. ಆದರೆ, ಈ ತನಕ ಯಾವ ಅಧಿಕಾರಿಯೂ ಈ ಬಗ್ಗೆ ಸ್ಪಂದಿಸಿಲ್ಲ. ಈ ಸಂಬಂಧ ಈಗಾಗ್ಲೇ ಪೊಲೀಸರು ತನಿಖೆ ಶುರುಮಾಡಿದ್ದು, ತನಿಖೆಯಲ್ಲಿ ಏರ್ಟೆಲ್-ಬೆಸ್ಕಾಂನ ಬೇಜವಾಬ್ದಾರಿತನ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳು ಜೈಲುಪಾಲಾಗುವುದು ಕಟ್ಟಿಟ್ಟ ಬುತ್ತಿ.
ರಷ್ಯಾದ ವಿರುದ್ಧ ಹೋರಾಡಲು ಪ್ರಜೆಗಳ ಕೈಗೆ ಶಸ್ತ್ರಾಸ್ತ್ರ ನೀಡಲು ಸಿದ್ಧ ಎಂದ ಉಕ್ರೇನ್ ಅಧ್ಯಕ್ಷ….!
ಇನ್ನು ಘಟನೆಯ ಬಗ್ಗೆ ತಿಳಿದುಕೊಳ್ಳುವುದಾದರೆ, ಫೆಬ್ರವರಿ 19ರಂದು ಜೆಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯ ದಿನದಂದು ಹೈಟೆನ್ಷನ್ ಕರೆಂಟ್ ವೈಯರ್ ಕೇಬಲ್ ಗೆ ತಾಕಿತ್ತು, ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಈ ಸಂದರ್ಭದಲ್ಲಿ ಅಂಗಡಿಗೆ ಗ್ಯಾಸ್ ಸಪ್ಲೈ ಮಾಡೋಕೆ ಬಂದಿದ್ದ ವ್ಯಕ್ತಿಯ ವಾಹನದ ಟೈಯರ್ ಕೇಬಲ್ ಗೆ ಸ್ಪರ್ಷವಾಗಿದೆ. ಆಗ ಅಂಗಡಿ ಮುಂಭಾಗ ಕುಳಿತಿದ್ದ ಧನಂಜಯ್ ಹಾಗೂ ತನ್ಮಯ್ ಎಂಬ ಮಗು, ಇಬ್ಬರಿಗೂ ವಿದ್ಯುತ್ ತಗುಲಿದೆ. ಘಟನೆಯಲ್ಲಿ ಧನಂಜಯ್ ಅವರ ತಲೆ, ಬೆನ್ನು, ಮುಖಕ್ಕೆ ಗಂಭೀರವಾಗಿ ಗಾಯವಾಗಿದೆ. ಸಧ್ಯ ಇಬ್ಬರು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.