ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ 10 ಮಂದಿ ಹೆಚ್ಚುವರಿ ನ್ಯಾಯಮೂರ್ತಿಗಳ ಸೇವೆ ಖಾಯಂಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಇಂದು 10 ನ್ಯಾಯಮೂರ್ತಿಗಳು ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು 10 ನ್ಯಾಯಾಧೀಶರಿಗೆ ಪ್ರತಿಜ್ಞಾವಿದಿ ಬೋಧಿಸಿದರು.
ಹೈಕೋರ್ಟ್ ಗೆ ವಿವಿಧ ಕಾಲಾವಧಿಯಲ್ಲಿ ನೇಮಕಗೊಂಡಿದ್ದ ಹೆಚ್ಚುವರಿ ನ್ಯಾಯಮೂರ್ತಿಗಳಾದ ಎಂ.ಐ.ಅರುಣ್, ಇ.ಎಸ್ ಇಂದಿರೇಶ್, ರವಿ ವೆಂಕಪ್ಪ ಹೊಸಮನಿ, ಎಸ್.ವಿಶ್ವಜಿತ್ ಶೆಟ್ಟಿ, ಎ.ಜಿ.ಉಮಾ, ಪಿ.ಎನ್.ದೇಸಾಯಿ, ಪಿ.ಕೃಷ್ಣ ಭಟ್ ಸೇರಿದಂತೆ 10 ನ್ಯಾಯಾಮೂರ್ತಿಗಳ ಸೇವೆಯನ್ನು ರಾಷ್ಟ್ರಪತಿಗಳ ಆದೇಶಾನುಸಾರ ಕೇಂದ್ರ ಸರ್ಕಾರ ಖಾಯಂಗೊಳಿಸಿ ಆದೇಶ ನೀಡಿತ್ತು.