ಬೆಂಗಳೂರು: ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ದೇಶ ದ್ರೋಹಿಗಳು ಇಂತಹ ಕೃತ್ಯವೆಸಗುತ್ತಿದ್ದಾರೆ. ನ್ಯಾಯಮೂರ್ತಿಗಳಿಗೆ ಬೆದರಿಕೆಯೊಡ್ದುತ್ತಿರುವುದು ಖಂಡನೀಯ ಎಂದು ಹೇಳಿದರು.
ಹಿಜಾಬ್ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲು ಅವಕಾಶವಿದೆ. ಆದರೂ ಕೂಡ ಇಂತಹ ಕೆಲಸಕ್ಕೆ ಮುಂದಾಗಿದ್ದು ಖಂಡನೀಯ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಸೆಕ್ಷನ್ ಹಾಕಿ ಕೇಸ್ ನಡೆಸಲು ಸೂಚಿಸಿದ್ದೇನೆ. ಜಡ್ಜ್ ಗಳಿಗೆ Y ಶ್ರೇಣಿ ಭದ್ರತೆಗೆ ಸೂಚಿಸಲಾಗಿದೆ ಎಂದರು.
ಕೇವಲ 1 ರೂ. ವೇತನಕ್ಕೆ ಕೆಲಸ ಮಾಡಲು ಸಿದ್ದರಾದ ಅಡ್ವೊಕೇಟ್ ಜನರಲ್…!
ಇಂತಹ ಘಟನೆ ನಡೆಯುತ್ತಿದ್ದರೂ ಈಗ ಸೋಕಾಲ್ಡ್ ಸೆಕ್ಯೂಲರ್ ಗಳು ಮೌನವಾಗಿರುವುದು ಯಾಕೆ ? ಒಂದು ವರ್ಗದ ಜನಕ್ಕೆ ಇಷ್ಟು ಓಲೈಕೆ ಸರಿಯಲ್ಲ. ಈಗಲಾದರೂ ಹೊರಬಂದು ಘಟನೆ ಖಂಡಿಸಲಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ಇಬ್ಬಗೆಯ ನೀತಿಗೆ ಸಿಎಂ ಟಾಂಗ್ ನೀಡಿದ್ದಾರೆ.