ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತಾಡಿದ್ದಾರೆ ಎನ್ನಲಾದ ಆಡಿಯೋ ಬಾಂಬ್ ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ಕಟೀಲ್ ಆಡಿಯೋ ಕ್ಲಿಪ್ ಇದೀಗ ಹೈಕಮಾಂಡ್ ಅಂಗಳ ತಲುಪಿದೆ.
ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ವೈರಲ್ ಆಗಿರುವ ನಳಿನ್ ಕಟೀಲ್ ಅವರ ಆಡಿಯೋವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಈ ಆಡಿಯೋ ಕ್ಲಿಪ್ ನ್ನು ತರಿಸಿಕೊಂಡಿದ್ದು, ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಕೊರೊನಾ ಲಸಿಕೆ ತೆಗೆದುಕೊಂಡವರು ಆಗ್ತಾರೆ ‘ಬಾಹುಬಲಿ’: ಪ್ರಧಾನಿ ಮೋದಿ
ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಸಚಿವ ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರ ಟೀಂ ಅನ್ನೇ ತೆಗೆದು ಹಾಕಲಾಗುವುದು, ಎಲ್ಲಾ ಹೊಸ ಟೀಂ ರಚನೆಯಾಗಲಿದೆ. ಯಾರಿಗೂ ಹೇಳಬೇಡ. ಇನ್ಮುಂದೆ ಎಲ್ಲರೂ ನಮ್ಮ ಕೈಯಲ್ಲೇ. ಮೂವರ ಹೆಸರಿದೆ, ಇಲ್ಲಿನವರನ್ನು ಯಾರನ್ನೂ ಮಾಡಲ್ಲ ಎಲ್ಲಾ ದೆಹಲಿಯಿಂದಲೇ ಹಾಕ್ತಾರೆ ಎಂದು ತುಳುವಿನಲ್ಲಿ ಮಾತನಾಡಿದ ಸಂಭಾಷಣೆ ವೈರಲ್ ಆಗಿದೆ. ಆದರೆ ಈ ಆಡಿಯೋ ತನ್ನದಲ್ಲ ಎಂದು ನಳಿನ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.