alex Certify BIG NEWS: ಹೇಗಿದೆ ನೋಡಿ ಸಿದ್ದರಾಮಯ್ಯ ರಾಜ್ಯ ಪ್ರವಾಸದ ಹೈಟೆಕ್ ಬಸ್; ರಾಜ್ಯ ಪ್ರವಾಸಕ್ಕೆ ಸಿದ್ಧವಾಯ್ತು ವಿಶೇಷ ಬಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೇಗಿದೆ ನೋಡಿ ಸಿದ್ದರಾಮಯ್ಯ ರಾಜ್ಯ ಪ್ರವಾಸದ ಹೈಟೆಕ್ ಬಸ್; ರಾಜ್ಯ ಪ್ರವಾಸಕ್ಕೆ ಸಿದ್ಧವಾಯ್ತು ವಿಶೇಷ ಬಸ್

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ರಾಜ್ಯ ಪ್ರವಾಸಕ್ಕೆ ಸಿದ್ಧಗೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗಾಗಿ ವಿಶೇಷ ಬಸ್ ಸಿದ್ಧಗೊಂಡಿದ್ದು, ಇಂದು ಇದೇ ಬಸ್ ನಲ್ಲಿ ಕೋಲಾರ ಜಿಲ್ಲೆಗೆ ಸಿದ್ದರಾಮಯ್ಯ ತೆರಳಿದ್ದಾರೆ.

ಕ್ಯಾರಾವನ್ ರೀತಿಯ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರ ಬಳಿ ಇರುವ ಸ್ಪೆಷಲ್ ಬಸ್ ಮಾದರಿಯಲ್ಲಿಯೇ ಸಿದ್ದರಾಮಯ್ಯನವರ ವಿಶೇಷ ಬಸ್ ರೆಡಿಯಾಗಿದ್ದು, ಬಸ್ ನಲ್ಲಿ ಎಲ್ಲಾ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ.

ಬಸ್ ನಲ್ಲಿ ಚಾಲಕನನ್ನು ಹೊರತುಪಡಿಸಿ 6 ಪ್ರಯಾಣಿಕರಿಗೆ ಸೀಟ್ ವ್ಯವಸ್ಥೆ ಇದೆ. ವಿಶೇಷ ಬಸ್ ನಲ್ಲಿ ಏರ್ ಕಂಡಿಷನ್, ಮೂರು ಎಲ್ ಇಡಿ ಟಿವಿ, ಮೀಟಿಂಗ್ ವ್ಯವಸ್ಥೆ, ಲಿಫ್ಟ್, ಬಾತ್ ರೂಮ್, ಬಸ್ ಮೇಲೆ ನಿಂತು ಭಾಷಣ ಮಾಡಲು ಕೂಡ ವ್ಯವಸ್ಥೆಯಿದೆ. ಇದೇ ಬಸ್ ನಲ್ಲಿ ಕೋಲಾರಕ್ಕೆ ಹೊರಟಿರುವ ಸಿದ್ದರಾಮಯ್ಯ, ಇದೇ ಬಸ್ ನಲ್ಲಿ ಚುನಾವಣೆಗಾಗಿ ರಾಜ್ಯ ಸುತ್ತಲು ಕೂಡ ಪ್ಲಾನ್ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...