ಚಿಕ್ಕಮಗಳೂರು: ಓದು, ಬರಹ ಬಾರದ ಹೆಬ್ಬಟ್ಟಿನ ಜನರಿಗಾದರೂ ಇನ್ನೂ ಸ್ವಲ್ಪ ತಿಳುವಳಿಕೆ ಇರುತ್ತೆ. ಮತ್ತೊಬ್ಬರನ್ನು ಕೇಳಿ ಹೆಬ್ಬೆಟ್ಟು ಒತ್ತುತ್ತಾರೆ. ಆದರೆ ಸಿದ್ದರಾಮಯ್ಯನವರಿಗೆ ಏನು ಹೇಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನ ಬಸವನಹಳ್ಳಿಯಲ್ಲಿ ಮಾತನಾಡಿದ ಸಿ.ಟಿ. ರವಿ, ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರದ್ದು ಬರೀ ನಾಟಕ. 2016ರಲ್ಲಿ ಮತಾಂತರ ಮಸೂದೆಗೆ ಸಹಿ ಹಾಕಿ, ಈಗ ನಾನು ಹಾಕಿಲ್ಲ ಎನ್ನುತ್ತಿದ್ದಾರೆ. ಆ ಮೇಲೆ ಸಹಿ ಹಾಕಿದ್ದರೆ ತೋರಿಸಿ ಎನ್ನುತ್ತಿದ್ದಾರೆ. ತೋರಿಸಿದರೆ ಗೊತ್ತಿಲ್ಲದೇ ಸಹಿ ಹಾಕಿದ್ದೇನೆ ಎಂದು ಹೇಳುತ್ತಿದ್ದಾರೆ. ಇದು ಅವರ ರಾಜಕೀಯ ನಾಟಕ ಎಂದು ಕಿಡಿಕಾರಿದರು.
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡ ಪಾಪಿಗಳು
ಕಾಂಗ್ರೆಸ್ ಚಲಾವಣೆಯಲ್ಲಿ ಇಲ್ಲದ ಸವಕಲು ನಾಣ್ಯ. ಮುಂದಿನ ಚುನಾವಣೆಯಲ್ಲಿ ಯಾರ ನೇತೃತ್ವದಲ್ಲಿ ಚುನಾವಣೆ ನಡೆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮಾತ್ರವಲ್ಲ, ಸೋನಿಯಾ ಗಾಂಧಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೂ ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ್ ನ ನೀವು ಏನೆಂಬುದನ್ನು ಅಧಿವೇಶನದಲ್ಲಿ ನೋಡಿದ್ದೇವೆ. ಅವರ ನಿಲುವುಗಳೇ ಅವರಿಗೆ ಮಾರಕವಾಗಲಿದೆ ಎಂದು ಹೇಳಿದರು.