ಧಾರವಾಡ: ಆಸ್ತಿಗಾಗಿ ಮಗನೊಬ್ಬ ಹೆತ್ತ ತಾಯಿಯನ್ನೇ ಹತ್ಯೆಗೈದ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ನಡೆದಿದೆ.
65 ವರ್ಷದ ಶಾಂತವ್ವ ಕಲ್ಲಪ್ಪ ಅಣ್ಣಿಗೇರಿ ಕೊಲೆಯಾದ ಮಹಿಳೆ. ಬಸವರಾಜ್ ಕಲ್ಲಪ್ಪ ಅಣ್ಣಿಗೇರಿ ತಾಯಿಯನ್ನೇ ಕೊಲೆಗೈದ ಮಗ.
ಆಸ್ತಿಗಾಗಿ ತಾಯಿಯನ್ನು ಪೀಡಿಸಿ ಜಗಳವಾಡಿದ್ದ ಬಸವರಾಜ್ ದೊಣ್ಣೆಯಿಂದ ತಾಯಿಯನ್ನು ಬಡಿದು ಕೊಂದಿದ್ದಾನೆ. ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿ ಬಸವರಾಜ್ ನನ್ನು ಬಂಧಿಸಿದ್ದಾರೆ.