ದೇಶದ ಅತಿ ದೊಡ್ಡ IPO ಗಾಗಿ ಎಲ್ಲರೂ ಬಹುನಿರೀಕ್ಷೆಯಿಂದಿದ್ದರು. ಆದರೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಐಪಿಒ ಮೊದಲ ದಿನವೇ ಹೂಡಿಕೆದಾರರಿಗೆ ದೊಡ್ಡ ಹೊಡೆತ ನೀಡಿದೆ. ಎಲ್‌ಐಸಿ IPOದಿಂದ ಹೆಚ್ಚಿನ ಹಣ ಗಳಿಸುವ ಭರವಸೆಯಲ್ಲಿ ಪಾಲಿಸಿದಾರರು ಸಹ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದರು. ಆದರೆ ಎಲ್ಲರೂ ಭಾರೀ ನಷ್ಟ ಅನುಭವಿಸಿದ್ದಾರೆ. ಇದರ ಹೊರತಾಗಿಯೂ LIC IPO ಅನೇಕ ದಾಖಲೆಗಳನ್ನು ಮಾಡಿದೆ.
ಜಾಗತಿಕ ಮಾರುಕಟ್ಟೆಯಿಂದ ನಿರಾಶಾದಾಯಕ ಸಂಕೇತಗಳ ನಡುವೆಯೇ ಎಲ್ಐಸಿ ಐಪಿಒ ಕೂಡ ನಷ್ಟದ ಹಾದಿಯಲ್ಲಿ ಸಾಗಿರೋದು ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ. ಈಗ ಎಲ್‌ಐಸಿ ಷೇರು ಮಾರುವುದು ಸರಿಯೇ ಎಂಬ ಪ್ರಶ್ನೆ ಅವರಲ್ಲಿ ಮೂಡುತ್ತಿದೆ. ಆದರೆ ಸರ್ಕಾರಿ ಕಂಪನಿಯಾಗಿರುವುದರಿಂದ ಹೂಡಿಕೆದಾರರು ಎಲ್‌ಐಸಿ ಬಗ್ಗೆ ಅಪಾರ ನಂಬಿಕೆ ಹೊಂದಿದ್ದಾರೆ.
ಸರ್ಕಾರವು LIC IPO ನಿಂದ ಭಾರಿ ಹಣ ಮಾಡುವ ನಿರೀಕ್ಷೆ ಇಟ್ಟುಕೊಂಡಿದೆ. ಆದ್ರೆ ಷೇರು ಮೌಲ್ಯ ದುರ್ಬಲವಾಗಿರೋದಕ್ಕೆ ಮಾರುಕಟ್ಟೆಯೇ ಕಾರಣವೆಂದು ಸರ್ಕಾರ ದೂಷಿಸುತ್ತಿದೆ. ಮಾರುಕಟ್ಟೆಯಲ್ಲಿನ ಏರಿಳಿತದಿಂದ ಹೂಡಿಕೆದಾರರು ನಷ್ಟ ಅನುಭವಿಸಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯೇ ಇದಕ್ಕೆ ಕಾರಣವೆಂದು ವಿಶ್ಲೇಷಿಸಲಾಗ್ತಿದೆ. ಹೂಡಿಕೆದಾರರು ಎಲ್‌ಐಸಿ ಷೇರುಗಳನ್ನು ದೀರ್ಘಕಾಲ ಇಟ್ಟುಕೊಳ್ಳುವಂತೆ ಸರ್ಕಾರ ಸಲಹೆ ನೀಡಿದೆ.
ಪಾಲಿಸಿದಾರರು, ಚಿಲ್ಲರೆ ಹೂಡಿಕೆದಾರರು ಮತ್ತು ಉದ್ಯೋಗಿಗಳು ರಿಯಾಯಿತಿಯಲ್ಲಿ ಷೇರುಗಳನ್ನು ಪಡೆದಿದ್ದಾರೆ, ಆದ್ದರಿಂದ ಅವರು ಕಡಿಮೆ ನಷ್ಟವನ್ನು ಅನುಭವಿಸಿದ್ದಾರೆ ಅನ್ನೋದು ತಜ್ಞರ ಅಭಿಮತ. ಕಂಪನಿ ಆರಂಭದಲ್ಲಿ ಎಲ್‌ಐಸಿ ಷೇರಿನ ಬೆಲೆಯಲ್ಲಿ 949 ರೂಪಾಯಿಗೆ ನಿಗದಿ ಮಾಡಿತ್ತು. ಆದ್ರೆ ಎಲ್‌ಐಸಿ ಷೇರುಗಳು ಶೇ.9ರಷ್ಟು ಕುಸಿತ ಕಂಡಿವೆ. ಪ್ರತಿ ಷೇರಿನ ಬೆಲೆ 867 ರೂಪಾಯಿಗೆ ಬಂದು ತಲುಪಿತ್ತು.