ಬಳ್ಳಾರಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಬಳ್ಳಾರಿಯಲ್ಲಿ ಮತ್ತೆ ಅಬ್ಬರಿಸಿದ್ದಾರೆ. ಹುಲಿ ಬೇಟೆಗೆ ನಿಂತರೆ ಬೇಟೆ ಆಡೇ ಆಡುತ್ತೆ ಎಂದು ಗುಡುಗಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಜನಾರ್ಧನ ರೆಡ್ಡಿ, ಓರ್ವ ಹುಡುಗ ಹುಲಿ ಫೋಟೋ ತೋರಿಸಿ ನನ್ನನ್ನು ಹುಲಿ ಎಂದ. ಹುಲಿಗೆ ಹಸಿವಾದಾಗ ಬೇಟೆಗೆ ಬರುತ್ತೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಕ್ರಿಯರಾಗುವ ಸುಳಿವು ನೀಡಿದ್ದಾರೆ.
ಕೆಲವೊಬ್ಬರು ಮತ್ತೆ ನನ್ನನ್ನು ಬಳ್ಳಾರಿಯಿಂದ ಹೊರ ಹಾಕಲು ಯತ್ನಿಸಿದ್ದಾರೆ. 2-3 ತಿಂಗಳಲ್ಲಿ ಮತ್ತೆ ನಾನು ಬಳ್ಳಾರಿಗೆ ಬರುತ್ತೇನೆ. ಸುಮ್ಮನೇ ಇದ್ದೀನಿ ಎಂದರೆ ನನ್ನ ಕೈಯಲ್ಲಿ ಏನೂ ಆಗಲ್ಲ ಅಂತಲ್ಲ. ಒಂದೂವರೆ ವರ್ಷದಿಂದ ಬಳ್ಳಾರಿ ಮನೆಯಿಂದ ಹೊರ ಬಂದಿಲ್ಲ, ನಮ್ಮ ಕುಟುಂಬ ಬಳ್ಳಾರಿಯ ಅಭಿವೃದ್ದಿಗೆ ಸದಾ ಬದ್ಧವಾಗಿದೆ. ನಮ್ಮ ಕುಟುಂಬದ ಮೇಲೆ ಬಳ್ಳಾರಿ ಜನರ ಆಶಿರ್ವಾದ ಇರಲಿ. ನಾವು ಯಾವತ್ತೂ ಜನರ ಜೇಬಿಗೆ ಕತ್ತರಿ ಹಾಕಿಲ್ಲ. ಯಾರಿಗೂ ಮೋಸ ಮಾಡಿಲ್ಲ. ನಾನು ಅದೃಷ್ಟದಿಂದ ಮೇಲೆ ಬಂದವನು ಎಂದು ಹೇಳಿದ್ದಾರೆ.