ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆ ಹಿಂದೆ ಬೇರೆ ಶಕ್ತಿಯ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಹುಬ್ಬಳ್ಳಿ ಗಲಭೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪೊಲೀಸ್ ಠಾಣೆಯ ಮೇಲೆ ನಡೆದಿದ್ದು, ವ್ಯವಸ್ಥಿತ ದಾಳಿ. ಗಲಭೆ ಹಿಂದೆ ಬೇರೆ ಶಕ್ತಿಗಳ ಕುಮ್ಮಕ್ಕು ಇರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಗಲಭೆ ಬಗ್ಗೆ ಪೊಲೀಸರಿಗೆ ಹಲವು ಮಾಹಿತಿಗಳು ಸಿಕ್ಕಿವೆ. ಕೆಲವೇ ದಿನಗಳಲ್ಲಿ ಗಲಭೆ ಹಿಂದಿರುವವರ ಬಯಲಿಗೆಳೆಯುತ್ತೇವೆ ಎಂದರು.
ED ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದ ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ: 2 ಕೋಟಿ ರೂ. ಗಳಿಗೆ ಎಂ.ಎಫ್. ಹುಸೇನ್ ಪೇಂಟಿಂಗ್ ಖರೀದಿಸಲು ಗಾಂಧಿ ಪರಿವಾರದ ಒತ್ತಡ…!
ಗಲಭೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅವರು ಯಾರೇ ಆಗಿರಲಿ ತಪ್ಪಿತಸ್ಥರಿಗೆ ಶಿಕ್ಷೆ ನಿಶ್ಚಿತ ಎಂದು ತಿಳಿಸಿದರು.
ಇದೇ ವೇಳೆ ಪಿಎಸ್ಐ ನೇಮಕಾತಿ ಅಕ್ರಮ ವಿಚಾರವಾಗಿ ಮಾತನಾಡಿದ ಸಿಎಂ, ಪ್ರಕರಣವನ್ನು ಆಳವಾಗಿ ತನಿಖೆಗೆ ಸೂಚಿಸಿದ್ದೇವೆ. ಆಡಿಯೋ ಸೇರಿ ಹಲವು ವಿಚಾರಗಳು ಬಯಲಿಗೆ ಬಂದಿವೆ. ತನಿಖೆಯಿಂದಾಗಿ ಒಂದೊಂದೇ ವಿಡಿಯೋ, ಆಡಿಯೋ ಹೊರಬರ್ತಿವೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಿಐಡಿ ತನಿಖೆಯಿಂದಾಗಿ ನಾವು ನಿರೀಕ್ಷೆ ಮಾಡದ ವಿಚಾರಗಳು ಹೊರ ಬರುತ್ತಿವೆ. ಇದರ ಹಿಂದೆ ಎಷ್ಟೇ ಚಾಣಾಕ್ಷ್ಯಇರಲಿ ಯಾರನ್ನೂ ಬಿಡುವ ಪ್ರಶ್ನೆ ಇಲ್ಲ. ಆದಷ್ಟು ಬೇಗ ದಿವ್ಯಾ ಹಾಗರಗಿ ಬಂಧನವಾಗಲಿದೆ. ಅವರ ಕಚೇರಿ, ಮನೆಯನ್ನು ಈಗಾಗಲೇ ಸೀಜ್ ಮಾಡಲಾಗಿದೆ. ಪಿಎಸ್ಐ ಆಯ್ಕೆ ನ್ಯಾಯಯುತವಾಗಿದ್ದರೆ ಮಾತ್ರ ಉತ್ತಮ ಪೊಲೀಸರು ಸಿಗ್ತಾರೆ ಎಂದು ಹೇಳಿದರು.