ಶಿವಮೊಗ್ಗ : ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಷಡ್ಯಂತ್ರವಿದೆ. ಶಾಂತಿಯುತವಾದ ಕರ್ನಾಟಕದಲ್ಲಿ ಅಧಿಕಾರ ದಾಹಕ್ಕೆ ಕೊಲೆ ದೊಂಬಿ ನಡೆಸುತ್ತಿದ್ದಾರೆಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.
ಬುಧವಾರ ಬೆಳಗ್ಗೆ ನಗರದ ʼಹರ್ಷ ದಿ ಫೆರ್ನ್ʼ ಹೋಟೆಲ್ ನಲ್ಲಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಹುಬ್ಬಳ್ಳಿ ಗಲಭೆ ಪ್ರಕರಣವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಗಲಭೆ ವೇಳೆ ಪೊಲೀಸ್ ಜೀಪ್ ಮೇಲೆ ನಿಂತು ತಲೆ ಕಡೆಯಿರಿ, ರುಂಡ ಚೆಂಡಾಡಿರಿ ಅಂತೆಲ್ಲ ಕೂಗಾಡಿದ ಮೌಲ್ವಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ರ ಘಟಕದ ಅಧ್ಯಕ್ಷ ಅಲ್ತಾಪ್ ಉಳ್ಳೂರು ಅವರನ್ನು ಸರ್ಕಾರ ತಕ್ಷಣವೇ ಬಂಧಿಸಬೇಕು. ತಲೆ ಮರೆಸಿಕೊಂಡ ಮೌಲ್ವಿ ಬಂಧನಕ್ಕೆ ಕೇಂದ್ರ ಸರ್ಕಾರವು ಕೂಡ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಆರ್ ಎಸ್ ಎಸ್ ಮುರ್ದಾಬಾದ್ ಘೋಷಣೆ, ಕಲ್ಲುತೂರಾಟ ಮಾಡುವ ಪುಂಡರಿಗೆ ಹಿಂದೂ ಸಂಘಟನೆ ಎದುರಿಸುತ್ತದೆ ಆದರೆ ಕಾನೂನು ಕೈಗೆ ತೆಗೆದುಕೊಳ್ಳಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡೂ ಗಂಭೀರವಾಗಿ ತೆಗೆದುಕೊಂಡು ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಮೌಲ್ವಿ ಹೇಡಿಯಂತೆ ಓಡಿಹೋಗಿದ್ದಾನೆ. ದೇಶ ದ್ರೋಹ, ಗೂಂಡಾಗಿರಿ ಮಾಡಿ ಓಡಿರುವ ಮೌಲ್ವಿಗಳನ್ನ ಬಂಧಿಸಬೇಕು. ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಇದೇ ರೀತಿ ಆಯಿತು. ಹರ್ಷನ ಕೊಲೆ ಸಮಯದಲ್ಲಿ ಇದೇ ರೀತಿ ಆಯಿತು. ಮೌಲ್ವಿ ಬಂಧನವಾಗಬೇಕು. ಅನೇಕ ಗೂಂಡಗಿರಿ ಮಾಡಿದ ವ್ಯಕ್ತಿಗಳ ಗಡಿ ಪಾರ್ ಮಾಡಬೇಕು ಗೂಂಡ ಆಕ್ಟ್ ಪ್ರಕಾರ ಬಂಧನವಾಗಬೇಕು ಎಂದು ಒತ್ತಾಯಿಸಿದರು.