ಬೆಂಗಳೂರು: ಇಡಿ ನೋಟೀಸ್ ಮೇಲೆ ನೋಟೀಸ್ ನೀಡುತ್ತಿದೆ ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಭಾರತ್ ಜೋಡೋ ಸಭೆಯಲ್ಲಿ ಮಾತಾನಾಡಿದ ಡಿ.ಕೆ.ಶಿವಕುಮಾರ್, ನನ್ನನ್ನು ತಿಹಾರ್ ಜೈಲಿಗೆ ಹೋಗಿ ಬಂದವನು ಎಂದು ಆರೋಪಿಸುತ್ತಾರೆ. ನನ್ನ ಮೇಲೆ ಏನಾದ್ರೂ ಕಮಿಷನ್ ಆರೋಪ ಇದ್ಯಾ? ಇಡಿ ನೋಟೀಸ್ ಮೇಲೆ ನೋಟಿಸ್ ಕೊಡ್ತಿದೆ. ಇಡಿ ನೋಟೀಸ್ ಗೆ ನಾನು ಹೆದರುವ ಮಾತಿಲ್ಲ ಎಂದರು.
ಹುಟ್ಟಿನಿಂದಲೂ ಕೃಷಿಕ, ಉದ್ಯಮಿಯಾಗಿದ್ದು ನನ್ನ ಆಯ್ಕೆ, ರಾಜಕಾರಣ ಮಾಡುವುದು ನನ್ನ ಪ್ಯಾಷನ್ ಆಗಿದೆ. ಎಲ್ಲಿ ಶ್ರಮ ಇರುತ್ತದೆಯೋ ಅಲ್ಲಿ ಪ್ರತಿಫಲ ಇದ್ದೇ ಇರುತ್ತದೆ ಎಂದರು. ಇದೇ ವೇಳೆ ವಿಧಾನಸಭೆ ಚುನಾವಣೆ ಟಿಕೆಟ್ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್ ಯಾರು ಕೆಲಸ ಮಾಡುತ್ತಾರೆ ಅವರಿಗೆ ಮಾತ್ರ ಟಿಕೆಟ್. ಎಲ್ಲಾ ಕ್ಷೇತ್ರಗಳಲ್ಲೂ ಎಐಸಿಸಿ ಕಮಿಟಿ ಕೆಲಸ ಮಾಡುತ್ತಿದೆ. ಯಾರು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿದ್ದಾರೆ. ನನ್ನ ಕೆಲಸ, ನೀವು ಮಾಡುತ್ತಿರುವ ಕೆಲಸವನ್ನೂ ಗಮನಿಸುತ್ತಿದ್ದಾರೆ. ನಿಮ್ಮಿಂದ ಗೌಪ್ಯ ಪತ್ರ ಪಡೆದಿರುವುದು ಯಾರಿಗೂ ತೋರಿಸಲ್ಲ, ಆ ಪತ್ರ ರಾಹುಲ್, ಸೋನಿಯಾ, ನನ್ನ ಬಳಿ ಮಾತ್ರ ಇರುತ್ತೆ. ನೀವು ಕೊಟ್ಟ ಗೌಪ್ಯ ಪತ್ರ ಸಿ ಎಲ್ ಪಿ ನಾಯಕರಿಗೂ ತೋರಿಸಿಲ್ಲ ಎಂದು ಹೇಳಿದರು.