alex Certify BIG NEWS: ಹುಚ್ಚಾಸ್ಪತ್ರೆಯಲ್ಲಿ ಕಿರುಚಾಡಿದಂತೆ ಏನಿದು ? JDS ಶಾಸಕ ಅನ್ನದಾನಿ ವಿರುದ್ಧ ಸ್ಪೀಕರ್ ಗರಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹುಚ್ಚಾಸ್ಪತ್ರೆಯಲ್ಲಿ ಕಿರುಚಾಡಿದಂತೆ ಏನಿದು ? JDS ಶಾಸಕ ಅನ್ನದಾನಿ ವಿರುದ್ಧ ಸ್ಪೀಕರ್ ಗರಂ

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ʼಹಿಂದಿ ದಿವಸ್ʼ ಆಚರಣೆ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದ್ದು, ಜೆಡಿಎಸ್ ಸದಸ್ಯರು ಹಿಂದಿ ಹೇರಿಕೆ ಸರಿಯಲ್ಲ ಎಂದು ಪ್ರತಿಭಟನೆ ನಡೆಸಿದರು. ಈ ವೇಳೆ ಜೆಡಿಎಸ್ ಸದಸ್ಯರ ನಡೆಗೆ ಸ್ಪೀಕರ್ ಸಿಟ್ಟಾದ ಘಟನೆ ನಡೆದಿದೆ.

ವಿಧಾನಸಭೆಯಲ್ಲಿ ಹಿಂದಿ ದಿವಸ್ ಆಚರಣೆಗೆ ಜೆಡಿಎಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ಅನ್ನದಾನಿ ಯಾವುದೇ ಭಾಷೆಯನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಮೊದಲು ಕರ್ನಾಟಕದಲ್ಲಿ ಕನ್ನಡ ಕಡ್ಡಾಯಗೊಳಿಸಿ ಎಂದು ಕಿರುಚಾಡಿದ್ದಾರೆ.

ಜೆಡಿಎಸ್ ಶಾಸಕ ಅನ್ನದಾನಿ ಕೂಗಾಟ ಕಂಡು ಕೋಪಗೊಂಡ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇದೇನು ಜಾತ್ರೆನಾ ? ಸಂತೆನಾ ? ಹುಚ್ಚಾಸ್ಪತ್ರೆಯಲ್ಲಿ ಕಿರುಚಾಡಿದಂತೆ ಏನಿದು ? ಕುಮಾರಸ್ವಾಮಿಯವರೇ ನೀವಾದರೂ ನಿಮ್ಮ ಶಾಸಕರಿಗೆ ಹೇಳಬಾರದೇ, ಸುಮ್ಮನೇ ಕಿರುಚಾಡಿದರೆ ಏನು ಮಾಡಲು ಸಾಧ್ಯ ಎಂದು ಗರಂ ಆದರು.

ಈ ವೇಳೆ ಮಧ್ಯಪ್ರವೇಶಿಸಿದ ಕುಮಾರಸ್ವಾಮಿ, ಹಿಂದಿ ಭಾಷೆ ಹೇರಿಕೆಗೆ ನಮ್ಮ ವಿರೋಧವಿದೆ. ಕರ್ನಾಟಕದಲ್ಲಿ ಹಿಂದಿ ದಿವಸ್ ಆಚರಣೆ ಅಗತ್ಯವಿಲ್ಲ. ಮೊದಲು ಕನ್ನಡ ಭಾಷೆ ಕಡ್ಡಾಯ, ರಕ್ಷಣೆ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...