alex Certify BIG NEWS: ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವರು ಮಾತನಾಡುತ್ತಾರೆ; ಸೊಗಡು ಶಿವಣ್ಣ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ ಡಿ.ಕೆ.ಶಿ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವರು ಮಾತನಾಡುತ್ತಾರೆ; ಸೊಗಡು ಶಿವಣ್ಣ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ ಡಿ.ಕೆ.ಶಿ.

ಬೆಂಗಳೂರು; ಡಿ.ಕೆ. ಶಿವಕುಮಾರ್ ರಿಟೇಲ್ ಅಲ್ಲ, ಹೋಲ್ ಸೇಲ್ ವ್ಯಾಪಾರಿ ಎಂದು ಗುಡುಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ಕಿಡಿ ಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವರು ಮಾತನಾಡುತ್ತಾರೆ. ಅಂತವರ ಬಗ್ಗೆ ನಾನು ಮಾತನಾಡಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ತುಮಕೂರಿನಲ್ಲಿ ನನ್ನ ಆಸ್ತಿಯಿದ್ದರೆ ಅವನೇ ಇಟ್ಟುಕೊಳ್ಳಲಿ, ಅವನಿಗೆ ಎಲ್ಲ ಆಸ್ತಿಯನ್ನು ಗಿಫ್ಟ್ ಆಗಿ ಕೊಟ್ಟುಬಿಡುತ್ತೇನೆ. ರಾಜಕೀಯವಾಗಿ ಆತನಿಗೆ ಜಾಗವಿಲ್ಲ, ಹಾಗಾಗಿ ಮಾತನಾಡುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದರು.

ಪದವೀಧರರಿಗೆ ಭರ್ಜರಿ ಶುಭ ಸುದ್ದಿ: 1 ಲಕ್ಷಕ್ಕೂ ಹೆಚ್ಚು ಹೊಸಬರ ನೇಮಕಾತಿಗೆ ಮುಂದಾದ ಐಟಿ ಕಂಪನಿಗಳು; ಇಲ್ಲಿದೆ ಮಾಹಿತಿ

ಸೊಗಡು ಶಿವಣ್ಣ ಮೊದಲು ರಾಜಕೀಯವಾಗಿ ಜಾಗ ಪಡೆದುಕೊಳ್ಳಲಿ. ನಂತರ ನನ್ನ ವಿರುದ್ಧ ಮಾತನಾಡಲಿ ಎಂದು ಹೇಳಿದರು.

ತುಮಕೂರಿನಲ್ಲಿ ಡಿ.ಕೆ. ಶಿವಕುಮಾರ್ ಬೇನಾಮಿ ಆಸ್ತಿ ಇದೆ. ಕೃಷ್ಣಮೂರ್ತಿ ಎಂಬುವವರ ಹೆಸರಲ್ಲಿ ಆಸ್ತಿ ಮಾಡಿದ್ದಾರೆ. ಪಾವಗಡದಲ್ಲಿ ಸೋಲಾರ್ ಪಾರ್ಕ್ ಇದೆ. ಡಿ.ಕೆ.ಶಿ. ಸಾವಿರಾರು ಕೋಟಿ ಅವ್ಯವಹಾರ ನಡೆಸಿದ್ದು, ಆತ ರಿಟೇಲ್ ಅಲ್ಲ, ಹೋಲ್ ಸೇಲ್ ವ್ಯಾಪಾರಿ ಎಂದು ಸೊಗಡು ಶಿವಣ್ಣ ಆರೋಪಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...