ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡುವ ಪ್ಲಾನ್ ನಲ್ಲಿದ್ದರೆ, ನಿಮಗೊಂದು ಖುಷಿ ಸುದ್ದಿಯಿದೆ. ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಹೀರೋ ಎಲೆಕ್ಟ್ರಿಕ್ ಭಾರತದಲ್ಲಿ ಹೀರೋ ಎಡ್ಡಿ ಬಿಡುಗಡೆ ಮಾಡಿದೆ. ಹಿರೋ ಎಡ್ಡಿ ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಬೆಲೆ 72,000 ರೂಪಾಯಿ ಎಂದು ಕಂಪನಿ ಹೇಳಿದೆ.
ಹೀರೋ ಎಡ್ಡಿ ಅನೇಕ ವೈಶಿಷ್ಟತೆಯನ್ನು ಹೊಂದಿದೆ. ಕಡಿಮೆ ಬೆಲೆಗೆ ಉತ್ತಮ ಲುಕ್ ಹಾಗೂ ಸುಧಾರಿತ ಫೀಚರ್ ನೀಡ್ತಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಲಗೇಜ್ ತೆಗೆದುಕೊಂಡು ಹೋಗಲು ಉತ್ತಮ ಆಯ್ಕೆ ಎನ್ನಬಹುದು. ಕಿರಾಣಿ ಅಂಗಡಿ ಮಾಲೀಕರನ್ನು ಇದು ಸೆಳೆಯಲಿದೆ.
ಹೀರೋ ಎಡ್ಡಿ, ಇ-ಲಾಕ್, ಫೈಂಡ್ ಮೈ ಬೈಕ್, ರಿವರ್ಸ್ ಮೋಡ್, ವಿಶಾಲ ಬೂಟ್ ಸ್ಪೇಸ್ ನೊಂದಿಗೆ ಬರಲಿದೆ. ಗ್ರಾಹಕರಿಗೆ ಇದು ಎರಡು ಬಣ್ಣದಲ್ಲಿ ಲಭ್ಯವಿದೆ. ಗ್ರಾಹಕರು ತಿಳಿ ನೀಲಿ ಮತ್ತು ಹಳದಿ ಬಣ್ಣದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕೆ ಯಾವುದೇ ನೋಂದಣಿ ಫಲಕ ಅಥವಾ ಪರವಾನಗಿ ಅಗತ್ಯವಿಲ್ಲ.
ಹೀರೋ ಕಂಪನಿಯು ದೇಶಾದ್ಯಂತ 750 ಕ್ಕೂ ಹೆಚ್ಚು ಮಾರಾಟ ಮತ್ತು ಸೇವಾ ಮಳಿಗೆಗಳನ್ನು ಹೊಂದಿದೆ. ಸದ್ಯ ಕಂಪನಿ ಚಾರ್ಜಿಂಗ್ ಮೂಲಸೌಕರ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತಿದೆ.