ಬೆಂಗಳೂರು: ರಾಜ್ಯದಲ್ಲಿ ವ್ಯಾಪಿಸಿರುವ ಹಿಜಾಬ್ ವಿವಾದ ಪೂರ್ವ ನಿಯೋಜಿತ. ಇದರ ಹಿಂದೆ ಕೆಲ ಸಂಘಟನೆಗಳ ಷಡ್ಯಂತ್ರವಿದೆ ಈ ಬಗ್ಗೆ ಎನ್ ಐ ಎ ತನಿಖೆಯಾಗಬೇಕು ಎಂದು ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ತಿಳಿಸಿದ್ದಾರೆ.
ಹಿಜಾಬ್ ಹಿಂದೆ ದೇಶ ವಿಭಜನೆ ಮಾಡುವ ಕುತಂತ್ರವಿದೆ. ಹಿಂದೂಗಳು ಯಾವತ್ತೂ ಆಕ್ಷನ್ ಗೆ ಹೋಗುವುದಿಲ್ಲ. ರಿಯಾಕ್ಷನ್ ಮಾತ್ರ ಮಾಡುತ್ತಾರೆ. ಅವರು ಹಿಜಾಬ್ ಧರಿಸಿದ್ದಕ್ಕೆ ಕೇಸರಿ ಶಾಲು ಹಾಕಿದ್ದಾರೆ. ಹೈಕೋರ್ಟ್ ಮಧ್ಯಂತರ ಆದೇಶ ನೀಡಿದರೂ ಹಿಜಾಬ್ ಧರಿಸುತ್ತಿದ್ದಾರೆ ನಾಳೆ ಸುಪ್ರೀಂ ಕೋರ್ಟ್ ಆದೇಶ ನೀಡಿದರೂ ಹಿಜಾಬ್ ಧರಿಸಿ ಬರ್ತಾರೆ ಎಂದು ಹೇಳಿದರು.
ಮಣಿಪುರ ಚುನಾವಣೆಗೆ ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿ, ಕನ್ಹಯ್ಯಾ ಕುಮಾರ್ ಸೇರಿ 30 ತಾರಾ ಪ್ರಚಾರಕರು
ಇದೇ ವೇಳೆ ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಭಾಕರ್ ಭಟ್, ಜಮೀರ್ ಅಹ್ಮದ್ ಹೇಳಿದ್ದು ಅವರ ಸಮಾಜದ ಬಗ್ಗೆ. ಮುಸ್ಲೀಂ ಮಹಿಳೆಯರು ಮನೆಯಲ್ಲಿಯೂ ಬುರ್ಖಾ ಧರಿಸುತ್ತಾರೆ. ಅರಬ್ ದೇಶಗಳಲ್ಲಿ ಮುಸ್ಲೀಂ ಪುರುಷರು ಏನು ಮಾಡಿಬಿಡುತ್ತಾರೆಂಬ ಭಯಕ್ಕೆ ಮಹಿಳೆಯರು ಬುರ್ಖಾ ಧರಿಸುತ್ತಾರೆ. ಕಾರಣ ಅವರ ಸಮುದಾಯದ ಪುರುಷರಿಂದ ರಕ್ಷಣೆ ಪಡೆಯಲು ಎಂದಿದ್ದಾರೆ.
ವಿದ್ಯಾರ್ಥಿಗಳು ಈ ಹಿಂದಿನಂತೆ ಶಾಲಾ-ಕಾಲೇಜಿಗೆ ಬರಲಿ, ಸರ್ಕಾರ ಕ್ರಮ ಕೈಗೊಳ್ಳಲು ಹಿಂಜರಿಯಬಾರದು ಎಂದು ತಿಳಿಸಿದ್ದಾರೆ.