ಬೆಂಗಳೂರು: ಏಪ್ರಿಲ್ 22ರಿಂದ ಮೇ 18ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದ್ದು, ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ. ನಾಗೇಶ್, ಶಿಕ್ಷಣ ಇಲಾಖೆ ಹೊರಡಿಸಲಿರುವ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು. ಎಸ್.ಎಸ್.ಎಲ್.ಸಿ ಪರೀಕ್ಷೆ ರೀತಿಯಲ್ಲಿಯೇ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದ್ದು, ಹಿಜಾಬ್ ಗೆ ಅವಕಾಶವಿಲ್ಲ. ಹಿಜಾಬ್ ಧರಿಸಿ ಬಂದರೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶವಿಲ್ಲ ಎಂದು ಹೇಳಿದರು.
ತಾಯಿ-ಮಗಳ ಹತ್ಯೆ; ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟ
ರಾಜ್ಯದ ಜಿಲ್ಲಾ ಕಾಲೇಜುಗಳಲ್ಲಿ ಶೇ.90 ರಷ್ಟು ಸಮವಸ್ತ್ರ ಇದೆ. ಶೇ.10 ರಷ್ಟು ಕಾಲೇಜುಗಳಲ್ಲಿ ಮಾತ್ರ ಸಮವಸ್ತ್ರ ಇಲ್ಲ. ಯಾವುದೇ ಧರ್ಮ ಸೂಚಕ ವಸ್ತ್ರ ಧರಿಸಿ ಬರುವಂತಿಲ್ಲ, ಆಯಾ ಕಾಲೇಜುಗಳ ಎಸ್ ಡಿ ಎಂಸಿ ಸೂಚನೆಗಳ ಪಾಲನೆ ಕಡ್ಡಾಯ. ಪಿಯು ಪರೀಕ್ಷೆಗೂ ಧರ್ಮಸೂಚನೆ ವಸ್ತ್ರಗಳು ನಿಷೇಧ. ಕೋರ್ಟ್ ತೀರ್ಪಿನಂತೆ ಸಮವಸ್ತ್ರ ಪಾಲನೆ ಮಾಡಲಾಗುವುದು ಎಂದರು.