ಕಲಬುರ್ಗಿ: ರಾಜ್ಯಾದ್ಯಂತ ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ ಮುಂದುವರೆದಿರುವಾಗಲೇ ಇದೀಗ ಕುಂಕುಮ ಚಳುವಳಿ ಆರಂಭವಾಗಿದೆ.
ಕಲಬುರ್ಗಿ ಜಿಲ್ಲೆಯ ಶರಣಬಸವೇಶ್ವರ ದೇಗುಲದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ದಿವ್ಯಾ ಹಾಗರಗಿ ನೇತೃತ್ವದಲ್ಲಿ ಕುಂಕುಮ ಚಳುವಳಿ ನಡೆಸಲಾಗಿದೆ. ಅರಿಷಿಣ, ಕುಂಕುಮ ಇಟ್ಟು, ಬಳೆ ತೊಡಿಸುವ ಮೂಲಕ ನೂರಾರು ಮಹಿಳೆಯರು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ ಜೈಲು ಸೇರಿ, ಜಾಮೀನಿನ ಮೇಲೆ ಹೊರಬಂದ ಪೊಲೀಸ್ ಪೇದೆ…!
ಈ ಬಗ್ಗೆ ಮಾತನಾಡಿದ ದಿವ್ಯಾ ಹಾಗರಗಿ, ನಮ್ಮ ಸಂಸ್ಕೃತಿ, ಸಂಪ್ರದಾಯ ಆಚರಣೆ ಪ್ರತೀಕವಾಗಿ ಕುಂಕುಮ ಚಳುವಳಿ ಆರಂಭಿಸಿದ್ದೇವೆ. ಶರಣಬಸವೇಶ್ವರ ದೇವಸ್ಥಾನದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಒಂದೊಂದು ದಿನ ಒಂದೊಂದು ದೇವಸ್ಥಾನದಲ್ಲಿ ಅಭಿಯಾನ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಶಾಲಾ-ಕಾಲೇಜಿನಲ್ಲಿ ಆರಂಭವಾಗಿರುವ ಹಿಜಾಬ್ ವಿವಾದಕ್ಕೂ ಕುಂಕುಮ ಚಳುವಳಿಗೂ ಯಾವುದೇ ಸಂಬಂಧವಿಲ್ಲ. ಹಿಜಾಬ್ ಒಂದು ವ್ಯವಸ್ಥೆ ಅದಕ್ಕೆ ಧರ್ಮ, ಹಕ್ಕು ಎಂದು ಬಣ್ಣ ಹಚ್ಚಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಹಾಳುಮಾಡಿಕೊಳ್ಳಬಾರದು. ಹಿಜಾಬ್ ವಿಚಾರ ಹೈಕೋರ್ಟ್ ನಲ್ಲಿರುವುದರಿಂದ ಹೆಚ್ಚಿನ ಅಭಿಪ್ರಾಯ ವ್ಯಕ್ತಪಡಿಸಲ್ಲ ಎಂದು ಹೇಳಿದ್ದಾರೆ.