ಇಂದಿನಿಂದ ದ್ವಿತೀಯ ಪರೀಕ್ಷೆ ಆರಂಭವಾಗಿದ್ದು, ಮೇ 8 ರ ವರೆಗೆ ಈ ಪರೀಕ್ಷೆಗಳು ನಡೆಯಲಿವೆ. ಹೈಕೋರ್ಟ್ ಆದೇಶದಂತೆ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಹಿಜಾಬ್ ಸೇರಿದಂತೆ ಧಾರ್ಮಿಕತೆ ಬಿಂಬಿಸುವ ಯಾವುದೇ ಉಡುಪು, ಚಿಹ್ನೆಗಳನ್ನು ಧರಿಸಿಕೊಂಡು ಬರಬಾರದೆಂದು ಸೂಚಿಸಲಾಗಿದೆ.
ಇದರ ಮಧ್ಯೆ ಉಡುಪಿಯ ವಿದ್ಯೋದಯ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿರುವ ಹಿಜಾಬ್ ಪರ ಹೋರಾಟ ನಡೆಸುತ್ತಿರುವ ಇಬ್ಬರು ವಿದ್ಯಾರ್ಥಿನಿಯರಾದ ಆಲಿಯಾ ಅಸ್ಸಾದಿ, ರೇಷಂ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ತಮಗೆ ಅವಕಾಶ ನೀಡುವಂತೆ ಪ್ರಾಂಶುಪಾಲರ ಬಳಿ ಮನವಿ ಮಾಡುತ್ತಿದ್ದಾರೆನ್ನಲಾಗಿದೆ.
ಪರೀಕ್ಷಾ ಬೆಲ್ ಆದರೂ ಸಹ ಈ ವಿದ್ಯಾರ್ಥಿನಿಯರು ತಮ್ಮ ಮನವಿ ಮುಂದುವರೆಸಿದ್ದು, ಈ ಹಿನ್ನಲೆಯಲ್ಲಿ ತಹಶೀಲ್ದಾರ್ ಸ್ಥಳಕ್ಕಾಗಮಿಸಿ ವಿದ್ಯಾರ್ಥಿನಿಯರೊಂದಿಗೆ ಮಾತನಾಡುವ ಸಾಧ್ಯತೆಯಿದೆ ಎನ್ನಲಾಗಿದೆ.