ಬಾಗಲಕೋಟೆ: ನಾನು ಹಿಂದು ವಿರೋಧಿಯಲ್ಲ, ಆದರೆ ಹಿಂದೂತ್ವದ ವಿರೋಧಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಪ್ರತಿಕ್ರಿಯಿಸಿರುವ ಮಂತ್ರಾಲಯದ ಸುಬುಧೇಂದ್ರ ತೀರ್ಥ ಶ್ರೀಗಳು, ದ್ವಂದ್ವ ಹೇಳಿಕೆಗೆ ಅರ್ಥವಿಲ್ಲ. ನಾನು ಹಿಂದು ಎಂದ ಮೇಲೆ ಹಿಂದುತ್ವ ವಿರೋಧಿಸುತ್ತೇನೆ ಎನ್ನುವುದು ಅರ್ಥಹೀನವಾದದ್ದು ಎಂದರು.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಹಿಂದೂ ಎಂದ ಮೇಲೆ ಹಿಂದುತ್ವವನ್ನು ಗೌರವಿಸಬೇಕು. ಹಿಂದುಗಳಲ್ಲಿ ಇರುವಂತದ್ದು ಹಿಂದುತ್ವ. ನನ್ನ ತಾಯಿ ಎನ್ನೋದು ಅವರು ನಿಸ್ಸಂತಾನ ಉಳ್ಳವಳು ಎನ್ನೋದು ಎಷ್ಟು ಅಪಹಾಸ್ಯ. ತಾಯಿ ಎಂದಮೇಲೆ ಅವಳಿಗೆ ನೀನು ಸಂತಾನ ಎಂದೇ ಆಯ್ತಲ್ಲ. ಹಾಗಾಗಿ ದ್ವಂದ್ವ ಹೇಳಿಕೆಗಳು ಅರ್ಥಪೂರ್ಣವಲ್ಲ ಎಂದು ಹೇಳಿದರು.
ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ವಿಚಾರ ವಿನಿಮಯ ಮಾಡಿಕೊಂಡು ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.