ಮಂಗಳೂರು: ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರು ಕಾಲೇಜು ಹಾಸ್ಟೇಲ್ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನ ಕದ್ರಿ ಯಲ್ಲಿ ನಡೆದಿದೆ.
ಕಾಲೇಜು ಶುಲ್ಕ ಪಾವತಿ ವಿಚಾರವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ. 21 ವರ್ಷದ ನೀನಾ ಮೃತ ವಿದ್ಯಾರ್ಥಿನಿ. ಕೇರಳದ ಕಣ್ಣೂರು ಜಿಲ್ಲೆಯ ಚಿರುಪ್ಪುಳ ಮೂಲದ ನೀನಾ ಮಂಗಳೂರಿನಲ್ಲಿ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದರು.
ನೀನಾ ಬರೆದಿಟ್ಟಿರುವ ಡೈರಿ ಕೂಡ ಪತ್ತೆಯಾಗಿದ್ದು, ಇದರಲ್ಲಿ ಶುಲ್ಕ ಪಾವತಿ ವಿಚಾರವಾಗಿ ಕಾಲೇಜಿನಿಂದ ಕಿರುಕುಳ ನೀಡಲಾಗುತ್ತಿದ್ದು, ತಾಯಿಗೆ ಕಾಲೇಜು ಶುಲ್ಕ ಕಟ್ಟುವುದು ಹೊರೆಯಾಗುತ್ತಿದೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟಿದ್ದಾಳೆ ಎನ್ನಲಾಗಿದೆ.
ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.