ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಪ್ರಿಯಾಂಕ್ ಖರ್ಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಅಭಿನಂದಿಸಲು ಗಣ್ಯರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಮನವಿಯೊಂದನ್ನು ಮಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ತಾವು ತೋರುತ್ತಿರುವ ಪ್ರೀತಿ, ಅಭಿಮಾನಕ್ಕೆ ಬೆಲೆಕಟ್ಟಲು ಸಾಧ್ಯವೇ ಇಲ್ಲಾ.
ಈಗ ಪ್ರತಿನಿತ್ಯ ಸಾವಿರಾರು ಜನರು ಮನೆಗೇ ಬಂದು ಶುಭ ಹಾರೈಸುತ್ತಿದ್ದೀರಿ. ಈ ಪ್ರಮಾಣದ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಹಾಗೂ ನನ್ನ ಕುಟುಂಬ ಸದಾ ಚಿರಋಣಿ. ನಿಮ್ಮ ಆಶೀರ್ವಾದ ಹಾಗೂ ಹಾರೈಕೆಗಳು ಜನಪರ ಕೆಲಸ ಮಾಡುತ್ತಲೇ ಇರಲು ನಮಗೆ ಸದಾ ಪ್ರೇರಣೆಯಾಗಿರಲಿದೆ.
ನಿಮ್ಮ ಅಭಿಮಾನ ವ್ಯಕ್ತಪಡಿಸುವ ಸಂದರ್ಭದಲ್ಲಿ ತಾವು ಹಾರ, ಪುಷ್ಪಗುಚ್ಛ, ಶಾಲು-ಶಲ್ಯಗಳ ಮೇಲೆ ಅನಗತ್ಯವಾಗಿ ಹಣ ವ್ಯಯಿಸುತ್ತಿರುವಿರಿ. ಇನ್ಮುಂದೆ ನಾನು ಇವ್ಯಾವುದನ್ನೂ ಸ್ವೀಕರಿಸದೇ ಇರಲು ನಿರ್ಧರಿಸಿದ್ದೇನೆ.
ಬುದ್ಧ-ಬಸವ-ಅಂಬೇಡ್ಕರ್-ಗುರು ನಾರಾಯಣ-ಸಂತ ಸೇವಲಾಲರಂತಹ ಮಹನೀಯರೆಲ್ಲಾ ಜ್ಞಾನಾರ್ಜನೆ ಜೀವನದ ಗುರಿಯಾಗಬೇಕು ಎಂದು ಪ್ರತಿಪಾದಿಸಿದ್ದರು. ನಮೆಲ್ಲರ ಪ್ರಯತ್ನ ಅದರೆಡೆಯೇ ಇರಲಿ. ಹೂಗುಚ್ಚದ ಬದಲಿಗೆ ಪುಸ್ತಕ ನಿಮ್ಮ ಆಯ್ಕೆಯಾಗಲಿ ಎಂದು ಮನವಿ ಮಾಡಿಕೊಂಡಿದ್ದಾರೆ.