ಬೆಂಗಳೂರು: ಕೇಂದ್ರ ಬಜೆಟ್ ನಲ್ಲಿ ಹೇಳುವಂತದ್ದು ಏನೂ ಇಲ್ಲ. ಜನಸಾಮಾನ್ಯರು, ಬಡವರಿಗೆ ಅನುಕೂಲವಾಗುವಂತದ್ದು ಏನನ್ನೂ ಘೋಷಿಸಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕೆಲವೊಮ್ಮೆ ಹಸಿದವರಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಎನ್ನುತ್ತಾರೆ. ಹಾಗೆ ತಣ್ಣೀರು ಬಟ್ಟೆ ಹಾಕಿಕೋ ಎಂದು ಹೇಳಿದಂತಿದೆ ಎಂದಿದ್ದಾರೆ.
ಬಜೆಟ್ ಬಗ್ಗೆ ಸಂಪೂರ್ಣ ಗಮನಿಸಿಲ್ಲ. ನದಿ ಜೋಡಣೆ ಕೇವಲ ಚರ್ಚೆಯಲ್ಲಿದೆ. ಅದು ಕಾರ್ಯರೂಪಕ್ಕೆ ಬರಬೇಕಿದೆ. ತೆರಿಗೆ ಹೆಚ್ಚಿಸಿಲ್ಲ ಎನ್ನುವುದು ಬಿಟ್ಟರೆ ಬಜೆಟ್ ನಲ್ಲಿ ಹೇಳುವಂತದ್ದು ಏನೂ ಇಲ್ಲ. ಯಾವುದೇ ಹೊಸ ಅಭಿವೃದ್ಧಿ ಕಾರ್ಯಕ್ರಮಗಳನ್ನು ಘೋಷಿಸಿಲ್ಲ. ವರ್ಷ ಕಳೆಯುವ ಬಜೆಟ್ ಅಷ್ಟೇ ಎಂದು ಹೇಳಿದ್ದಾರೆ.