ಬೆಂಗಳೂರು: ಯುಗಾದಿ ಸಂಭ್ರಮದ ನಡುವೆಯೇ ರಾಜ್ಯದಲ್ಲಿ ಹಲಾಲ್ ಹಾಗೂ ಜಟ್ಕಾ ಕಟ್ ವಿವಾದ ಆರಂಭವಾಗಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಹಬ್ಬ ಆಚರಿಸಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಎಲ್ಲಾ ಜಿಲ್ಲಾ ಎಸ್ ಪಿ ಹಾಗೂ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಜನತೆ ಈ ನಿಟ್ಟಿನಲ್ಲಿ ಸಹಕರಿಸಬೇಕು ಎಂದಿದ್ದಾರೆ.
ಬೆಲೆ ಏರಿಕೆ ಹೊತ್ತಲ್ಲೇ ರೈತರಿಗೆ ಬಿಗ್ ಶಾಕ್: ರಸಗೊಬ್ಬರ ದರ ಶೇ. 12.5 ರಷ್ಟು ಹೆಚ್ಚಳ
ಅವರವರ ಧರ್ಮ, ಹಬ್ಬಗಳ ಆಚರಣೆಗೆ ಸ್ವಾತಂತ್ರ್ಯ ಇದೆ. ಯಾರೂ ಕೂಡ ಕಾನೂನಿಗೆ ಧಕ್ಕೆಯಾಗುವಂತೆ ನಡೆದುಕೊಳ್ಳಬಾರದು ಎಂದು ಹೇಳಿದರು.