ಕಾರ್ಕಳ: ರಾಜ್ಯದಲ್ಲಿ ಆರಂಭವಾಗಿರುವ ಹಲಾಲ್ ಹಾಗೂ ಜಟ್ಕಾ ಕಟ್ ವಿವಾದ ವಿಚಾರವಾಗಿ ಮಾತನಾಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಮುಸ್ಲಿಂರು ಹಲಾಲ್ ಮಾಡುವುದಾದರೆ ಮಾಡಲಿ, ಹಿಂದೂಗಳು ಜಟ್ಕಾ ಕಟ್ ಮಾಡುವುದಾದರೆ ಮಾಡಲಿ ಸಮಾಜ ಒಡೆಯುವ ವಿಚಾರ ಬೇಡ ಎಂದು ಹೇಳಿದ್ದಾರೆ.
ಕಾರ್ಕಳದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಅವರವರ ಪದ್ಧತಿಯನ್ನು ಅವರವರು ಮುಂದುವರೆಸಿಕೊಂಡು ಹೋಗಲಿ. ಮುಸ್ಲಿಂರು ನಮ್ಮ ಮನೆಗೆ ಬಂದು ಹಲಾಲ್ ಬಗ್ಗೆ ಒತ್ತಡ ಹಾಕಲ್ಲ, ನಾವು ಅವರ ಮನೆಗೆ ಹೋಗಿ ಒತ್ತಡ ಹೇರಲ್ಲ. ಹಲಾಲ್, ಜಟ್ಕಾ ಕಟ್ ವಿಚಾರದಲ್ಲಿ ಅನಗತ್ಯವಾಗಿ ಸಮಾಜ ಒಡೆಯುವ ನಿಟ್ಟಿನಲ್ಲಿ ಕುತಂತ್ರ ನಡೆಯುತ್ತಿದೆ ಎಂದರು.
ಆಫ್ರಿಕನ್ ಹಂದಿ ಜ್ವರ ಪ್ರಕರಣ ಪತ್ತೆ ಬೆನ್ನಲ್ಲೇ ಹಂದಿ ಮಾಂಸ ಬ್ಯಾನ್ ಮಾಡಿದ ಮಿಜೋರಾಂ
ರಾಜ್ಯದಲ್ಲಿನ ಕೆಲ ವಿವಾದ ಕೆಲ ವ್ಯಕ್ತಿ, ಪಕ್ಷಗಳಿಂದ ಆರಂಭವಾಗುತ್ತಿದೆ. ಅವರವರ ಪೂಜೆ, ಪದ್ಧತಿ ಅವರವರು ಮಾಡಲಿ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಚುನಾವಣೆ ಸಂದರ್ಭದಲ್ಲಿ ಬಹಿರಂಗವಾಗಿ ಪರಸ್ಪರ ಕಾದಾಡೋಣ. ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟು ರಾಜಕಾರಣ ಮಾಡೋಣ ಆದರೆ ಈ ವಿಚಾರವಾಗಿ ನಾನು ರಾಜಕೀಯ ಮಾಡಲ್ಲ ಎಂದು ಹೇಳಿದ್ದಾರೆ.