alex Certify BIG NEWS: ಹಲವು ಉಗ್ರ ಸಂಘಟನೆಗಳಿಗೆ ರಿಮೋಟ್ ಕಂಟ್ರೋಲ್ ಆಗಿದ್ದ PFI; ಸಂಘಟನೆ ನಿಷೇಧ ಮಾಡಿದ್ದು ಸ್ವಾಗತಾರ್ಹ ಎಂದ ಸಿಎಂ ಬೊಮ್ಮಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹಲವು ಉಗ್ರ ಸಂಘಟನೆಗಳಿಗೆ ರಿಮೋಟ್ ಕಂಟ್ರೋಲ್ ಆಗಿದ್ದ PFI; ಸಂಘಟನೆ ನಿಷೇಧ ಮಾಡಿದ್ದು ಸ್ವಾಗತಾರ್ಹ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು: ದೇಶದಲ್ಲಿ 5 ವರ್ಷಗಳ ಕಾಲ ಪಿ ಎಫ್ ಐ ಸಂಘಟನೆ ನಿಷೇಧ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ದೇಶದ್ರೋಹಿ ಚಟುವಟಿಕೆಯಲ್ಲಿ ಈ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರು ಎಂಬ ಮಾಹಿತಿ ಇತ್ತು. ಸಾಕ್ಷಾಧಾರಗಳನ್ನು ಪಡೆದು ಕಾನೂನು ಪ್ರಕಾರ ಇಂದು ನಮ್ಮ ಸರ್ಕಾರ ಸಂಘಟನೆ ಬ್ಯಾನ್ ಮಾಡಿದೆ ಎಂದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಪಿ ಎಫ್ ಐ ಸಂಘಟನೆ ಯಾವಾಗ ನಿಷೇಧ ಮಾಡುತ್ತೀರಿ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಈಗ ಸರ್ಕಾರ ಉತ್ತರ ನೀಡಿದೆ. ಪಿ ಎಫ್ ಐ ನಿಷೇಧಿಸುವಂತೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳು ಕೂಡ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಂಘಟನೆಯನ್ನು ನಿಷೇಧಿಸಿದೆ.

ಪಿ ಎಫ್ ಐ ಕಾರ್ಯಕರ್ತರು ಹಲವು ಉಗ್ರಗಾಮಿ ಸಂಘಟನೆಗಳಲ್ಲಿ ತರಬೇತಿ ಪಡೆದು, ದುಷ್ಕೃತ್ಯ ನಡೆಸಲು ಮುಂದಾಗಿದ್ದರು. ದೇಶದ್ರೋಹಿ ಚಟುವಟಿಕೆಯಲ್ಲಿಯೂ ಪಿ ಎಫ್ ಐ ಭಾಗಿಯಾಗಿತ್ತು. ಹಲವು ಉಗ್ರ ಸಂಘಟನೆಗಳಿಗೆ ಪಿ ಎಫ್ ಐ ರಿಮೋಟ್ ಕಂಟ್ರೋಲ್ ಆಗಿತ್ತು. ಈ ಬಗ್ಗೆ ಸೂಕ್ತ ಸಾಕ್ಷಾಧಾರಗಳು ಲಭ್ಯವಾಗಿದ್ದವು. ಈ ನಿಟ್ಟಿನಲ್ಲಿ ಪಿ ಎಫ್ ಐ ಬ್ಯಾನ್ ಮಾಡಲಾಗಿದೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...