ಹುಬ್ಬಳ್ಳಿ: ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಕೇವಲ ದುಡ್ಡಿರುವವರು ಮಾತ್ರ ಇರುತ್ತಾರೆ. ಬಡವರಿಗೆ, ಪ್ರಾಮಾಣಿಕರಿಗೆ ಜಾಗವೇ ಇರುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಪಿಎಸ್ಐ ಪ್ರಕರಣದಲ್ಲಿ ಪಿಶಾಚಿಗಳು ಹಣ ಮಾಡಲು ಹೊರಟಿದ್ದರು. ಮುಂಜಾಗೃತೆ ವಹಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಹಣ ಕೊಟ್ಟು ನೌಕರಿ ಹಿಡಿದವರು ಬಡವರ ಕೆಲಸ ಮಾಡ್ತಾರಾ ? ಎಂದು ಪ್ರಶ್ನಿಸಿದ್ದಾರೆ.
ವೇಗವಾಗಿ ʼತೂಕʼ ಇಳಿಸಲು ಸಹಕಾರಿ ಈ 4 ಮಸಾಲೆ ಪದಾರ್ಥ
ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯ ಆಗಬಾರದು. ಯಾರೋ ಹೇಳಿದರು ಎಂದು ಈಗ ಏಕಾಏಕಿ ಪಿಎಸ್ಐ ಆಯ್ಕೆಯನ್ನೇ ರದ್ದು ಮಾಡಿರುವ ಸರ್ಕಾರದ ಕ್ರಮ ಸರಿಯಲ್ಲ. ಇದರಿಂದ ಬಡ, ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾದಂತಾಗುತ್ತದೆ ಎಂದು ತಿಳಿಸಿದ್ದಾರೆ.