ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವಿಶ್ವದ ಮೊದಲ ವ್ಯಕ್ತಿ, ಶಸ್ತ್ರಚಿಕಿತ್ಸೆ ನಡೆದು ಎರಡು ತಿಂಗಳುಗಳ ಬಳಿಕ ಸಾವನ್ನಪ್ಪಿದ್ದಾರೆ. ತಳಿ ಮಾರ್ಪಾಡು ಮಾಡಲಾಗಿದ್ದ ಹಂದಿಯ ಹೃದಯವನ್ನು ಈತನಿಗೆ ಕಸಿ ಮಾಡಲಾಗಿತ್ತು.
ಮಾನವ ಅಂಗಾಂಗಗಳ ಕೊರತೆ ದೀರ್ಘಕಾಲದಿಂದ್ಲೂ ಇದೆ. ಈ ರೀತಿ ಪ್ರಾಣಿಗಳ ಅಂಗಾಂಗ ಕಸಿ ಮೂಲಕ ಈ ಕೊರತೆ ನಿವಾರಿಸಬಹುದು ಅನ್ನೋ ಭರವಸೆ ಮೂಡಿತ್ತು. ಆದ್ರೆ ಹಂದಿಯ ಹೃದಯ ಅಳವಡಿಸಲಾಗಿದ್ದ ವ್ಯಕ್ತಿ ಮೃತಪಟ್ಟಿರೋದು ನಿರಾಸೆ ಮೂಡಿಸಿದೆ.
57 ವರ್ಷದ ಡೇವಿಡ್ ಬೆನೆಟ್ ಎಂಬಾತನಿಗೆ ಜನವರಿ 7ರಂದು ಹಂದಿಯ ಹೃದಯವನ್ನು ಕಸಿ ಮಾಡಲಾಗಿತ್ತು. ಆತ ಮಾರ್ಚ್ 8 ರಂದು ಸಾವನ್ನಪ್ಪಿದ್ದಾರೆ ಅಂತಾ ಅಮೆರಿಕದ ಮೇರಿಲ್ಯಾಂಡ್ ವಿಶ್ವವಿದ್ಯಾಲಯ ತಿಳಿಸಿದೆ.
ಕೆಲದಿನಗಳ ಹಿಂದೆಯೇ ಡೇವಿಡ್ ಆರೋಗ್ಯ ಹದಗೆಟ್ಟಿತ್ತು. ಆತ ಚೇತರಿಸಿಕೊಳ್ಳುವುದು ಅಸಾಧ್ಯ ಅನ್ನೋದು ಸ್ಪಷ್ಟವಾದ ನಂತರ, ಆತನಿಗೆ ವಿಶೇಷ ಆರೈಕೆ ವ್ಯವಸ್ಥೆ ಮಾಡಲಾಗಿತ್ತು.
ಸರ್ಜರಿ ಬಳಿಕ ಡೇವಿಡ್ ಆರೋಗ್ಯವಾಗಿಯೇ ಇದ್ದ. ಆದಷ್ಟು ಬೇಗ ಮನೆಗೆ ಹೋಗಿ ತನ್ನ ಪ್ರೀತಿಯ ನಾಯಿ ಲಕ್ಕಿಯನ್ನು ನೋಡಬೇಕೆಂಬ ಆಸೆ ವ್ಯಕ್ತಪಡಿಸಿದ್ದ.
1988ರಲ್ಲಿ ಡೇವಿಡ್ ವ್ಯಕ್ತಿಯೊಬ್ಬನಿಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದ. ಪಾರ್ಶ್ವವಾಯುವಿಗೆ ತುತ್ತಾಗಿದ್ದ ಆತ 2005ರಲ್ಲಿ ಮೃತಪಟ್ಟಿದ್ದ. ಈ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಡೇವಿಡ್ ಗೆ ಹೃದಯದ ತೀವ್ರತರ ಸಮಸ್ಯೆ ಇದ್ದಿದ್ದರಿಂದ ಹಂದಿಯ ಹೃದಯವನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿತ್ತು. ಡೇವಿಡ್ ಸಾವಿನ ಬಗ್ಗೆ ತಜ್ಞರು ಸಂತಾಪ ವ್ಯಕ್ತಪಡಿಸಿದ್ದಾರೆ.